ಜಿಲ್ಲೆ

ಅನ್ಯ ಕಾರಣಗಳಿಂದ ಕ್ಷೇತ್ರಕ್ಕೆಬರಲಾಗಲಿಲ್ಲ

ಕಲಘಟಗಿ: ನೆರೆ ಹಾವಳಿ ಹಾಗೂ ಕರೊನಾ ಮಹಾಮಾರಿ ಒಕ್ಕರಿಸಿದ ಸಂದರ್ಭದಲ್ಲಿ ನನಗೆ ಅನ್ಯ ಕಾರಣಗಳಿಂದ ಕ್ಷೇತ್ರಕ್ಕೆ ಬರಲಾಗಲಿಲ್ಲ. ಆದರೂ ಆಪ್ತ ಸಹಾಯಕರು ಹಾಗೂ ಪಕ್ಷದ ಮುಖಂಡರ ಸಂಪರ್ಕದಲ್ಲಿದ್ದು, ಜನರ ನೋವು- ಅಹವಾಲುಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದೇನೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.

ಪಟ್ಟಣದ ಹೊವಲಯದಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜನಸೇವೆ ಮಾಡಲು ಮತ ಕ್ಷೇತ್ರದಲ್ಲಿಯೇ ಇರಬೇಕೆಂದೇನಿಲ್ಲ. ಸೇವೆ ಮಾಡುವ ಮನಸ್ಥಿತಿ ಬೇಕು. ಈಗಿನ ಶಾಸಕರು ಸ್ಥಳಿಯರೇ ಆಗಿದ್ದು, ಆಡಳಿತಾವಧಿ ಹಾಗೂ ಇದುವರೆಗಿನ ಅವರ ಆಡಳಿತದ ಅಭಿವೃದ್ಧಿ ಕಾರ್ಯಗಳನ್ನು ತುಲನೆ ಮಾಡಿದರೆ ಅಭಿವೃದ್ಧಿ ಯಾವ ಸಮಯದಲ್ಲಾಗಿದೆ ಎಂಬುದು ಜನರಿಗೆ ಗೊತ್ತಾಗುತ್ತದೆ ಎಂದರು.

ಮತಕ್ಷೇತ್ರದಲ್ಲಿ ಆಡಳಿತ ಪಕ್ಷದ ಶಾಸಕರಿದ್ದಾರೆ. ಮುಂದಿನ ಎರಡೂವರೆ ವರ್ಷದ ಅಧಿಕಾರಾವಧಿಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಹಾಗೂ ಪಕ್ಷದ ಸಹಕಾರ ಸದಾ ಇರಲಿದೆ ಎಂದರು.

ಕಾರ್ಯಕರ್ತರ ಸಭೆಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಥಗೌಡ ಮುರಳ್ಳಿ, ಪ.ಪಂ. ಸದಸ್ಯ ವೃಷಭೇಂದ್ರ ಪಟ್ಟಣಶೆಟ್ಟಿ, ಲಿಂಗರೆಡ್ಡಿ ನಡುವಿನಮನಿ, ಹರಿಶಂಕರ ಮಠದ, ಅಜಮತುಲ್ಲಾಖಾನ ಜಹಗೀರದಾರ, ಸೋಮಶೇಖರ ಬೆನ್ನೂರ, ಗುರು ಬೆಂಗೇರಿ, ಸಿದ್ದು ತಳಬಾಗಿಲ, ವೈ.ಬಿ. ದಾಸನಕೊಪ್ಪ, ಮೈನುದ್ದೀನ್ ಕಾಶೀಮನವರ ಇತರರು ಇದ್ದರು.