ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಮುಖ್ಯ ದ್ವಾರ ಬಳಿ ಬ್ಯಾರಿಕೇಡ್ ತಳ್ಳುತ್ತಾ ಒಳಕ್ಕೆ ಪ್ರವೇಶಿಸಲು ಯತ್ನಿಸುತ್ತಿರುವ ರೈತರು.  
ಜಿಲ್ಲೆ

ಅನ್ನದಾತರ ಬಗ್ಗೆ ಜಿಲ್ಲಾಡಳಿತಕ್ಕೆ ಕಾಳಜಿ ಇಲ್ಲ

ಬಾಗಲಕೋಟೆ: ನೂರಾರು ಕೋಟಿ ರೂ. ಕಬ್ಬಿನ ಬಿಲ್ ಬಾಕಿ ಕೂಡಲೇ ಪಾವತಿಸಬೇಕು, ನಕಲಿ ರಸಗೊಬ್ಬರಗಳ ವಿರುದ್ಧ ಕ್ರಮ ತೆಗೆದುಕೊಂಡು ಸಂಬ0ಧಪಟ್ಟವರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಭಾರತೀಯ ಕಿಸಾನ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ಜಿಲ್ಲಾಡಳಿತ ಭವನ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ರೈತರನ್ನು ಬ್ಯಾರಿಕೇಡ್ ಹಾಕಿ ಪೊಲೀಸ ತೆಡೆಯೂಡಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು ಬ್ಯಾರಿಕೇಡ ಪಕ್ಕಕ್ಕೆ ಸರಿಸಿ ನುಗ್ಗಲು ಯತ್ನಿಸಿದರು. ಕೊನೆಗೆ ಪೊಲೀಸರು ಜಿಲ್ಲಾಡಳಿತ ಭವನ ಒಳಕ್ಕೆ ತೆರಳು ಅನುವು ಮಾಡಿಕೊಟ್ಟರು. ಈ ವೇಳೆ ಪೊಲೀಸರು, ರೈತರ ನಡುವೇ ತೀವ್ರ ಮಾತಿನ ಚಕಮಕಿ ನಡೆಯಿತು.

ಬಳಿಕ ಜಿ.ಪಂ ಸಭಾಭವನದಲ್ಲಿ ನಡೆದ ಸಭೆಯಲ್ಲಿ ರೈತ ಸಂಘದ ಮುಖಂಡ ಈರಪ್ಪ ಹಂಚಿನಾಳ ಮಾತನಾಡಿ, ರೈತರು ಗುಂಡಾಗಳು ಅಲ್ಲ. ಶಾಸಕರು, ಸಂಸದರು, ಒಳಗೆ ಬರುತ್ತಾರೆ. ದೇಶಕ್ಕೆ ಅನ್ನ ಹಾಕುವ ರೈತರಿಗೆ ಅನುಮತಿ ಇಲ್ಲ ಅಂದ್ರೇ ಹೇಗೆ? ನಾವೇನು ಇಲ್ಲಿ ವೈಯಕ್ತಿಕ ಕೆಲಸಕ್ಕೆ ಬಂದಿಲ್ಲ. ನಮ್ಮ ಪಾಲಿನ ಹಕ್ಕು ಕೇಳಲು ಬಂದಿದ್ದೇವೆ. ಸಾವಿರಾರು ಜನ ರೈತರು ಸೇರಿ ಪ್ರತಿಭಟನೆ, ಹೋರಾಟ ಮಾಡಿದಾಗ ಒಂದೇ ಒಂದು ಅಹಿತಕರ ಘಟನೆ ನಡೆಯಲು ಅವಕಾಶ ನೀಡಿಲ್ಲ. ಆದರು ನಮ್ಮ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಕಾಳಜಿ ಇಲ್ಲ. ಮುಖ್ಯವಾಗಿ ಕಬ್ಬು ಕಳುಹಿಸಿ ೬ ತಿಂಗಳಾದರು ಬಿಡಿಗಾಸು ಬಿಲ್ ಬಂದಿಲ್ಲ. ಸಾಲ ನೀಡಿದ ಬ್ಯಾಂಕಗಳು ರೈತರ ಮನೆ ಮುಂದೆ ನಿಂತು ಒತ್ತಡ ಹಾಕುತ್ತೀವೆ. ಮಕ್ಕಳ ಶಾಲೆ ಶುಲ್ಕ ತುಂಬಲು ಸಹ ಹಣವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿ.ಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ಜಿಲ್ಲೆಯಲ್ಲಿ ೧೪ ಸಕ್ಕರೆ ಕಾರ್ಖಾನೆಗಳ ಪೈಕಿ ೧೩ ಕಬ್ಬು ನುರಿಸಿವೆ. ಕೆಲವು ಕಾರ್ಖಾನೆಗಳು ಬಿಲ್ ನೀಡಲು ವಿಳಂಬ ಮಾಡಿವೆ. ಅಲ್ಲದೇ ನ್ಯಾಯಾಲಯಕ್ಕೆ ಹೋಗಿ ಬಿಲ್ ಪಾವತಿ ಮಾಡದಿರಲು ಸ್ಟೇ ತಂದಿದ್ದಾರೆ. ಕಬ್ಬು ಆಯುಕ್ತರ ಕಚೇರಿ ತಡೆಯಾಜ್ಞೆ ತೆರವುಗೊಳಿಸಲು ಮುಕ್ತಾಯವಾಗಿಲ್ಲ. ಕಳೆದ ಎಪ್ರೀಲ್, ಮೇ ನಲ್ಲಿ ನಡೆದ ಸಭೆಯಲ್ಲಿ ಕಬ್ಬು ಆಯುಕ್ತರನ್ನು ಬಾಗಲಕೋಟೆಗೆ ಆಹ್ವಾನಿಸಿ ಸಭೆ ನಡೆಸಲು ಮನವಿ ಮಾಡಲಾಗಿತ್ತು. ಇದು ವರೆಗೂ ಈ ಕೆಲಸ ಆಗಿಲ್ಲ. ಹೀಗೆ ಆದರೇ ಹೇಗೆ ಅಂತ ಪ್ರಶ್ನೆಗಳ ಸುರಿಮಳೆಗೈದರು.

ಬಳಿಕ ಜಿಲ್ಲಾಧಿಕಾರಿ ಸಂಗಮೇಶ ಎಂ. ಮಾತನಾಡಿ, ತಮ್ಮ ಎಲ್ಲ ಬೇಡಿಕೆಗಳ ಬಗ್ಗೆ ನಾವು ನಿರ್ಲಕ್ಷ್ಯ ಮಾಡಿಲ್ಲ. ಮುಂದಿನ ಸಾರಿ ಬ್ಯಾರಿಕೇಡ್ ಹಾಕುವದಿಲ್ಲ. ಜಿಲ್ಲಾಡಳಿತ ಮುಕ್ತವಾಗಿದೆ. ೨೦ ದಿನಗಳ ಕಾಲವಕಾಶ ನೀಡಿ, ಆಯುಕ್ತರೊಂದಿಗೆ ಮಾತನಾಡಿ ಸಭೆ ನಿಗಽ ಮಾಡಲಾಗುವುದು. ನ್ಯಾಯಾಲಯದ ವಿಚಾರ ಆಗಿರುವದರಿಂದ ತಕ್ಷಣಕ್ಕೆ ಯಾವುದೇ ನಿರ್ಧಾರ, ಭರವಸೆ ನೀಡುವುದು ಕಷ್ಟಕರ. ಇದೀಗ ತಾನೇ ಅಽಕಾರ ವಹಿಕೊಂಡಿದ್ದೇನೆ. ಸಮಯ ಕೊಡಿ ಅಂತ ರೈತರನ್ನು ಸಮಾಧಾನ ಪಡಿಸಿದರು.

ಆಹಾರ ಇಲಾಖೆ ಅಽಕಾರಿ ಶ್ರೀಶೈಲ ಕಂಕನವಾಡಿ ಮಾತನಾಡಿ, ಜಿಲ್ಲೆಯಲ್ಲಿ ೧೩ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿವೆ. ೧.೫ ಲಕ್ಷ ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ೫೪೦೦ ಅಽಕ ಹಣ ಬಿಲ್ ಪಾವತಿಸಬೇಕಿತ್ತು. ಹಂತ ಹಂತವಾಗಿ ಬಿಲ್ ಪಾವತಿಯಾಗಿ ಸದ್ಯ ೯೮ ಕೋಟಿ ರೂ. ಮಾತ್ರ ಬಾಕಿ ಉಳಿದಿದೆ. ಅದರಲ್ಲೂ ನಾಲ್ಕು ಸಕ್ಕರೆ ಕಾರ್ಖಾನೆಗಳು ಮಾತ್ರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಅಪರ ಜಿಲ್ಲಾಽಕಾರಿ ಅಶೋಕ ತೇಲಿ, ಎಸ್ಪಿ ಅಮರನಾಥ ರೆಡ್ಡಿ, ಜಿ.ಪಂ ಸಿಇಒ ಶಶಿಧರ ಕುರೇರ, ಡಿವೈಎಸ್‌ಪಿ ಗಜಾನನ ಹೊಸಳ್ಳಿ, ರೈತ ಮುಖಂಡರಾದ ಪರಶುರಾಮ ಮಂಟೂರ, ಗೋವಿಂದಪ್ಪ ಮೆಟಗುಡ್ಡ, ಬಸಪ್ಪ ಸಂಗಣ್ಣವರ, ಹುಸೇನ ಮೂಲಾದಾರ, ಗೋವಿಂದಪ್ಪ ಬೆಳಕಟ್ಟಿ, ಯಲ್ಪಪ್ಪ ಹೆಗಡೆ ಇತರರು ಇದ್ದರು.