ಜಿಲ್ಲೆ

ಅನ್ನದ ಮಹತ್ವ ತಿಳಿಯುವುದೇ ಸಂಸ್ಕಾರ

ಕೊರಟಗೆರೆ: ಅನ್ನವಿಲ್ಲದೆ ಜೀವವಿಲ್ಲ. ಅನ್ನದ ಮಹತ್ವವನ್ನು ಮನ@ಪೂರ್ವಕವಾಗಿ ಅರಿಯುವ ಶಿಕ್ಷಣವೇ ನಿಜವಾದ ಸಂಸ್ಕಾರ ಎಂದು ಎಲೆರಾಂಪುರ ಕುಂಚಿಟಿಗ ಮಹಾಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.

ಶನಿವಾರ ಮಠದಲ್ಲಿನ ಶಿಬಿರದಲ್ಲಿ ಮಕ್ಕಳ ಜತೆ ಸಂವಾದ ನಡೆಸಿದ ಸ್ವಾಮೀಜಿ, ಅನ್ನವೆಂಬುದು ದೇಹಕ್ಕೆ ಶಕ್ತಿ ನೀಡುವ ತತ್ವವಲ್ಲ, ಅದು ಜೀವನದ ತಾತ್ವಿಕ ಅಂಶ. ನಾವು ತಿನ್ನುವ ಪ್ರತಿಯೊಂದು ಅನ್ನದ ತುತ್ತೂ ರೈತನ ಶ್ರಮ, ಪ್ರಕೃತಿಯ ಅನುಗ್ರಹ, ಮತ್ತು ಸಮಾಜದ ಸಹಕಾರದಿಂದ ಸಾಧ್ಯವಾಗಿದೆ ಎಂದರು.

ಇಂದು ನೀವು ಆಹಾರ ವ್ಯರ್ಥ ಮಾಡಿದರೆ, ನಾಳೆ ಅದು ಮಾನವತೆಯ ಕಟು ಫಲವಾಗಿ ತಿರುಗಿ ಬರುವ ಸಾಧ್ಯತೆ ಇದೆ. ಆಹಾರ ವ್ಯರ್ಥತೆಯು ಪ್ರಾಕೃತಿಕ ಸಂಪತ್ತಿನ ದೋಷಪೂರಿತ ಬಳಕೆಯೊಂದಾಗಿದೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಸಿದರು. ಬೆಂಗಳೂರಿನ ಜೈ ಮಾರುತಿ ಟ್ರಾವಲ್ಸ್​ನ ರಂಗಸ್ವಾಮಿ, ನಿವೃತ್ತ ಪೊಲೀಸ್​ ಅಧಿಕಾರಿ ರಂಗನಾಥ್​, ಸಂಸ್ಕಾರ ಶಿಬಿರದ ಸಂಚಾಲಕ ಡಾ.ಕುಮಾರಸ್ವಾಮಿ, ಸಂಸತಿ ವಿಶ್ವವಿದ್ಯಾನಿಲಯ ಮಾಜಿ ಸಿಂಡಿಕೇಟ್​ ಸದಸ್ಯ ಡಾ.ಸಿ ನಂಜುಂಡಯ್ಯ, ಕನ್ನಡ ಪ್ರಾಧ್ಯಾಪಕ ಪ್ರೊ.ತುಕ್ಕಪ್ಪ, ಡಾ.ಬೋಗಣ್ಣ ಇದ್ದರು.