ಬಸವಕಲ್ಯಾಣದ ಸಂಸ್ಥಾನ ಗವಿಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ನಿಮಿತ್ತ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪಂಚಾಕ್ಷರಿ ಜಿ. ಹಿರೇಮಠ ಅವರಿಗೆ ಅಭಿನವ ರೇಣುಕ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ, ಡಾ.ಮಹೇಶ ಪಾಟೀಲ್, ಮಲ್ಲಯ್ಯ ಹಿರೇಮಠ, ರೇವಣಸಿದ್ದಯ್ಯ ಮಠಪತಿ, ಡಾ.ಬಸವರಾಜ ಸ್ವಾಮಿ, ರಾಕೇಶ ಪುರವಂತ, ಶಾಂತವೀರ ಸ್ವಾಮಿ ಇತರರಿದ್ದರು. 
ಜಿಲ್ಲೆ

ಅನ್ನ ನೀರಿನಷ್ಟೇ ಜ್ಞಾನವೂ ಮುಖ್ಯ

ಬಸವಕಲ್ಯಾಣ: ಮನುಷ್ಯನಿಗೆ ಅನ್ನ ನೀರಿನಷ್ಟೇ ಜ್ಞಾನವೂ ಮುಖ್ಯ. ಸತ್ಯದ ಮಾರ್ಗದಲ್ಲಿ ನಡೆಯಲು ಜ್ಞಾನದ ಅವಶ್ಯಕತೆ ಇದೆ ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ನಿಮಿತ್ತ ನಗರದ ಸಂಸ್ಥಾನ ಗವಿಮಠದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಅಭಿನವ ರೇಣುಕ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮನುಷ್ಯನಲ್ಲಿ ಸಂಪತ್ತಿನ ಶ್ರೀಮಂತಿಕೆ ಹೆಚ್ಚುತ್ತಿದೆ ಆದರೆ ಜ್ಞಾನದ ಬಡತನ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನೇತೃತ್ವ ವಹಿಸಿದ್ದ ಮಂಠಾಳ ಚೌಕಿ ಮಠದ ಪೀಠಾಧೀಪತಿ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಗವಿಮಠದ ಅಭಿನವ ಶ್ರೀಗಳು ಧಾರ್ಮಿಕ ಪರಂಪರೆ ಉಳಿಸಿಕೊಂಡು ಬರುವ ಜತೆಗೆ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮಠ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಹೇಶ ಪಾಟೀಲ ಮಾತನಾಡಿ, ಗವಿಮಠದ ಪೂಜ್ಯರು ಸಮಾಜೋಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಸೇವೆ ಮತ್ತು ಕಾರ್ಯ ಪ್ರಸಂಶನಾರ್ಹ ಎಂದರು.

ಪ್ರಶಸ್ತಿ ಪುರಸ್ಕೃತ ರೇವಣಸಿದ್ದಯ್ಯ ಮಠಪತಿ, ಬಿಡಿಪಿಸಿ ನಿರ್ದೇಶಕ ಮಲ್ಲಯ್ಯ ಹಿರೇಮಠ, ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ತಾಲೂಕು ಅಧ್ಯಕ್ಷ ಡಾ.ಬಸವರಾಜ ಸ್ವಾಮಿ, ಪ್ರಮುಖರಾದ ಬಸವಂತಪ್ಪ ಲವಾರೆ, ಮಲ್ಲಿಕಾರ್ಜುನ ನಂದಿ, ವಿಶ್ವನಾಥಪ್ಪ ಬಿರಾದಾರ, ಗುರುನಾಥ ಕೋಶೆಟ್ಟಿ, ಬಾಬುರಾವ ಉಳ್ಳೆ, ಡಾ. ವಿ. ಮಂಡಿ, ಬಸತೀರ್ಥಯ್ಯ ಕಾಡಾದಿ, ಶ್ರೀಶೈಲ ವಾತಡೆ, ರಾಕೇಶ ಪುರವಂತ, ಮಲ್ಲಿಕಾರ್ಜುನ ಅಲಗುಡೆ, ಸಂಜಯ ಜಾಧವ್, ಕಸಾಪ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ, ಬಸವರಾಜ ಸಿರಿ, ಶರಣುದಂಡೆ, ಶಾಂತಯ್ಯ ಮಠಪತಿ, ಶಶಿಧರ ಪಾಟೀಲ, ಸಾಹಿತಿ ವೀರಶೆಟ್ಟಿ ಪಾಟೀಲ, ಶರಣಯ್ಯ ಮಠಪತಿ, ಗೋವಿಂದರೆಡ್ಡಿ ಕೋತಾಪಲ್ಲೆ, ವಿಮಲಾಬಾಯಿ ಬಿರಾದಾರ, ಶೀಲಾದೇವಿ ಲವಾರೆ, ಸವಿತಾ ಸ್ವಾಮಿ, ಸುಮಂಗಲಾ ನಂದಿ, ಸರಸ್ವತಿ ಬೆಂಬಳಿ, ಸರೋಜನಿ ಹಿರೇಮಠ, ರೇಣುಕಾ ಮಠಪತಿ ಇದ್ದರು.

ರುದ್ರೇಶ್ವರ ಗೋರ್ಟಾ ಸ್ವಾಗತಿಸಿದರು. ಸೂರ್ಯಕಾಂತ ಶೀಲವಂತ ಪ್ರಾಸ್ತಾವಿಕ ಮಾತನಾಡಿದರು. ರಮೇಶ ರಾಜೋಳೆ ನಿರೂಪಣೆ ಮಾಡಿದರು. ಶರಣಬಸಪ್ಪ ಅಲಗುಡೆ ವೇದಘೋಷ ಮಾಡಿದರು. ಯುವ ಕಲಾವಿದ ವಿನಯ ಹಿರೇಮಠ ಪ್ರಾರ್ಥನಾ ಗೀತೆ ಹಾಡಿದರು.

ಪ್ರಶಸ್ತಿ ಪ್ರದಾನ: ಪ್ರೌಢಶಾಲೆ ನಿವೃತ್ತ ಮುಖ್ಯಗುರು ಪಂಚಾಕ್ಷರಿ ಜಿ. ಹಿರೇಮಠ ಹಾಗೂ ಸರ್ಕಾರಿ ಪ್ರೌಢ ಶಾಲೆ ನಿವೃತ್ತ ಪ್ರಥಮ ದರ್ಜೆ ಸಹಾಯಕ ರೇವಣಸಿದ್ದಯ್ಯ ಮಠಪತಿ ಅವರಿಗೆ ೨೦೨೫ರ ಅಭಿನವ ರೇಣುಕ ಶ್ರೀ ಪ್ರಶಸ್ತಿಗೆ ಪ್ರದಾನ ಮಾಡಿ ಗೌರವಿಸಲಾಯಿತು.