ಚಿತ್ರದುರ್ಗ: ಸಮೃದ್ಧ ಪ್ರಕೃತಿಗೆ ಯಜ್ಞ,ಯಾಗಾದಿಗಳ ಅಗತ್ಯವಿದೆ. ಯಜ್ಞ,ಹೋಮಗಳಿಂದ ಮಳೆ ಬರುತ್ತದೆಂಬ ನಂಬಿಕೆ ನಮ್ಮಲಿದೆ ಎಂದು ಶ್ರೀ ಕ ಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು. ಗೋನೂರು ಮುತ್ತಯ್ಯನಹಟ್ಟಿ ಶ್ರೀ ರಾಜರಾಜೇಶ್ವರಿ ದೇವಾಲಯ ದಲ್ಲಿ ಶ್ರಾವಣಮಾಸದ ಅಂಗವಾಗಿ ಏರ್ಪಡಿಸಿದ್ದ ಪೂಜೆ ಮತ್ತು ದೇವಸ್ಥಾನದ ಚಂದ್ರಶಾಲಾ ಕಟ್ಟಡ ಪ್ರಾರಂಭೋತ್ಸವ ಸಾನಿಧ್ಯ ವಹಿಸಿ ಅ ವರು ಅಶೀರ್ವಚನ ನೀಡಿದರು.
ಅನ್ನದಾಸೋಹ,ಗೋಸೇವೆ ಪುಣ್ಯದ ಕೆಲಸಗಳು.ಗೋಶಾಲೆಗಳನ್ನು ತೆರೆಯುವುದು ಸುಲಭ. ಆದರೆ ನಿರ್ವಹಣೆ ಕಷ್ಟ. ಶ್ರೀ ರಾಜರಾ ಜೇಶ್ವರಿ ದೇವಾಲಯದ ಅಭಿವೃದ್ಧಿಗೆ ಭಕ್ತರ ಸಹಕಾರ ಸರ್ಕಾರದ ನೆರವಿನ ಅಗತ್ಯವಿದೆ ಎಂದು ಶ್ರೀಗಳು,ಮುಂದಿನ ವರ್ಷ ಚಂದ್ರಶಾಲಾ ಕಟ್ಟಡ ಉದ್ಘಾಟನೆಗೊಳ್ಳಲಿ ಎಂದು ಹಾರೈಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ,ಧಾರ್ಮಿಕ ವ್ಯವಸ್ಥೆಯಲ್ಲಿ ನಂಬಿಕೆ ಮುಖ್ಯ,ಇದರಿಂದ ಒಳ್ಳೆಯದಾಗುತ್ತದೆ. ದೈವ ನಂ ಬಿಕೆಯಿಂದ ಸಂಸ್ಕೃತಿ,ಸಂಸ್ಕಾರ ಮೂಡುತ್ತದೆ. ಈ ದೇವಾಲಯದ ಅಭಿವೃದ್ಧಿಗೆ ಅನುದಾನದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಹಾಗೂ ತಮ್ಮ ಬೆಂಬಲ ಇದ್ದೇ ಇದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜರಾಜೇಶ್ವರಿ ದೇವಸ್ಥಾನ ಸೇವಾಟ್ರಸ್ಟ್ ಅಧ್ಯಕ್ಷ ನಾಗರಾಜ್‌ಭಟ್,ಮೂರು ವರ್ಷಗಳ ಹಿಂದೆ ಈ ದೇವಾಲಯ ಸ್ಥಾಪನೆಯಾಯಿತು. ನಿತ್ಯಯಜ್ಞ,ಗೋಸೇವೆ,ವೇದ ಪಾಠ ಶಾಲೆ ಹಾಗೂ ಅನ್ನದಾನ ಟ್ರಸ್ಟಿನ ಉದ್ದೇಶಗಳಾಗಿವೆ ಎಂದರು. ಉದ್ಯಮಿ ಪ್ರಭುದೇವ್,ಜಿಪಂ ಮಾಜಿ ಸದಸ್ಯ ಪ್ರಕಾಶ್‌ಮೂರ್ತಿ,ಮಾಜಿ ತಾ.ಪಂ.ಮಾಜಿ ಸದಸ್ಯೆ ಶಶಿಕಲಾ,ಗೋನೂರು ಗ್ರಾಪಂ ಅಧ್ಯಕ್ಷೆ ಹೊನ್ನಮ್ಮ,ಬಾಬಣ್ಣ,ವೀಣಾ,ಕಾಶಿವಿಶ್ವನಾಥ ಶೆಟ್ಟಿ ಮತ್ತಿತರರು ಇದ್ದರು.
(ಸಿಟಿಡಿ 18 ಗೋನೂರು)
ಚಿತ್ರದುರ್ಗ ತಾಲೂಕು ಗೋನೂರು ಮುತ್ತಯ್ಯನಹಟ್ಟಿ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ಶುಕ್ರವಾರ ಶ್ರಾವಣ ಮಾಸದ ಪೂ ಜಾ ಕಾರ‌್ಯಕ್ರಮ ಹಾಗೂ ಚಂದ್ರಶಾಲಾ ಕಟ್ಟಡ ಪ್ರಾರಂಭೋತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ನಾಗರಾಜ್‌ಭಟ್,ಪ್ರಭುದೇವ್ ಇದ್ದರು.
ರಘುಮೂರ್ತಿ ಮಗ್ ಶಾಟ್ ಬಳಸಬಹುದು.