ಜಿಲ್ಲೆ

ಅನುಪಮಾ ಸ್ಕೂಲ್‌ನಲ್ಲಿ ಚಿಣ್ಣರಿಗೆ ಭವ್ಯ ಸ್ವಾಗತ

Chitradurga - Desk - Pranav Kumar

ಚಿತ್ರದುರ್ಗ: ಶೈಕ್ಷಣಿಕ ವರ್ಷಾರಂಭ ಸಂಬಂಧ ನಗರದ ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಸೋಮವಾರ ಪ್ಲೇ ಹೋಂ, ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ ದೊರೆಯಿತು.

ಚಿಣ್ಣರ ಸ್ವಾಗತ ಸಮಾರಂಭ ಹಿನ್ನೆಲೆಯಲ್ಲಿ ಶಾರದಾ ದೇವಿಯ ಪೂಜೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಮಕ್ಕಳು ಶ್ಲೋಕ ಪಠಿಸುವ ಮೂಲಕ ವಿದ್ಯಾದೇವಿಗೆ ಭಕ್ತಿ ಸಮರ್ಪಿಸಿದರು.

ಮಕ್ಕಳಿಗೆ ದ್ವಾರದಲ್ಲಿಯೇ ಗುಲಾಬಿ, ಬಟನ್ಸ್ ಹೂಗಳನ್ನು ನೀಡುವ ಮೂಲಕ ಶಿಕ್ಷಕ-ಶಿಕ್ಷಕಿಯರು ಸ್ವಾಗತಿಸಿ ಬರಮಾಡಿಕೊಂಡರು. ವರ್ಣಮಯ ಬಲೂನ್‌ಗಳು ಮಕ್ಕಳ ಗಮನ ಸೆಳೆದವು.

ಗೊಂಬೆಗಳು, ಫ್ಲವರ್ ಪಾಟ್‌ಗಳು ಆಕರ್ಷಿಸಿದವು. ಪಾಲಕರು ಕೂಡ ತಮ್ಮ ಮಕ್ಕಳ ಚಿತ್ರಗಳನ್ನು ಪ್ರತ್ಯೇಕವಾಗಿ ತೆಗೆದು ಸಂಭ್ರಮಿಸಿದರು. ಕೆಲವರು ಸೆಲ್ಫಿ ಕೂಡ ತೆಗೆದುಕೊಂಡರು.

ಸ್ಕೂಲ್‌ನ ಕಾರ್ಯದರ್ಶಿಗಳಾದ ಎಸ್. ಭಾಸ್ಕರ್, ಎಸ್.ಬಿ. ರಕ್ಷಣ್, ಪ್ರಾಚಾರ್ಯ ಸಿ.ಡಿ. ಸಂಪತ್‌ಕುಮಾರ್ ಸೇರಿ ಸಿಬ್ಬಂದಿ ಇದ್ದರು.