ಜಿಲ್ಲೆ

ಅನುದಾನಕ್ಕಾಗಿ ಜಿಲ್ಲೆಯ 10 ಗೋ ಶಾಲೆಗಳಿಂದ ಪ್ರಸ್ತಾವನೆ

ಚಿತ್ರದುರ್ಗ: ಜಿಲ್ಲೆಯ 10 ಗೋ ಶಾಲೆಗಳಿಂದ ಪ್ರಸ್ತಾವನೆ ಬಂದಿವೆ ಎಂದು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಎನ್. ಕುಮಾರ್ ಹೇಳಿ ದರು. ಡಿಸಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಪ್ರಾಣಿ ದಯಾ ಸಂಘದ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿ,2025-26ನೇ ಸಾಲಿನಲ್ಲಿ ಸರ್ಕಾರದ ಅನುದಾನಕ್ಕಾಗಿ ಪ್ರಸ್ತಾವನೆ ಬಂದಿವೆ.

ಚಿತ್ರದುರ್ಗ ತಾಲೂಕಿನ ಕಾತ್ರಾಳು ಕೆರೆ ಆದಿಚುಂಚನಗಿರಿ ಗೋಶಾಲೆ, ಮುತ್ತಯ್ಯನಹಟ್ಟಿ ರಾಜರಾಜೇಶ್ವರಿ ದೇವಸ್ಥಾನ ಟ್ರಸ್ಟ್‌ನ ರಾಜರಾಜೇಶ್ವರಿ ಗೋಶಾಲೆ, ಚಳ್ಳಕೆರೆ ತಾಲೂಕು ನನ್ನಿವಾಳ ಬೊಮ್ಮದೇವರಹಟ್ಟಿ ಮುತೈಗಳ ಸ್ವಾಮಿ ಗೋಶಾಲೆ, ನಂದನಹಳ್ಳಿ ನಂದಾಮಸಂದ್ ಬಾವಾಜಿ ಪರಂಪರೆ ಶ್ರೀ ವೆಂಕಟೇಶ್ವರ ದೇವಸ್ಥಾನ ಬಾವಾಜಿ ಸೇವಾಶ್ರಮ ಹಾಗೂ ಸೇವಾಲಾಲ್ ದೇವರ ಹಸುಗಳ ಗೋ ರಕ್ಷಣಾ ಟ್ರಸ್ಟ್, ಹಿರೇಕೆರೆಕಾವಲು ಚೌಡೇಶ್ವರಿ ಗೋ ಸಂರಕ್ಷಣಾ ಟ್ರಸ್ಟ್, ನನ್ನಿವಾಳ ಕಟ್ಟೆಮನೆ ಮುತ್ತಿಗಾರ ದೇವರ ಎತ್ತುಗಳ ಕ್ಷೇಮಾಭಿವೃದ್ಧಿ ಟ್ರಸ್ಟ್, ಗೌಡಗೆರೆ ಶ್ರೀ ರಂಗನಾಥ ಸ್ವಾಮಿ ದೇವರ ಎತ್ತುಗಳ ಗೋರಕ್ಷಣಾ ಟ್ರಸ್ಟ್, ಮೊಳಕಾಲ್ಮೂರು ತಾಲೂಕು ಬ್ರಹ್ಮಗಿರಿ ಸಿದ್ದೇಶ್ವರ ಗೋಶಾಲೆ, ಹಿರಿಯೂರು ತಾಲೂಕು ಬೀರೇನಹಳ್ಳಿ ಸ್ವರ್ಣಭೂಮಿ ಗೋಶಾಲೆ, ಗಿಡ್ಡೋಬನಹಳ್ಳಿ ಗೋ-ಸಕೇತ ಶ್ರೀರಾಮ ಮಂಡಳಿ ರಾಮನವಮಿ ಸೆಲಬ್ರೇಷನ್ಸ್ ಟ್ರಸ್ಟ್ ಸೇರಿ ಜಿಲ್ಲೆಯಲ್ಲಿ ಅನುದಾನ ಕೋರಿ 10 ಪ್ರಸ್ತಾವನೆಗಳು ಬಂದಿವೆ ಎಂದರು.

ನಿಯಮಾನುಸಾರ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಎಡಿಸಿ ಕುಮಾರಸ್ವಾಮಿ ತಿಳಿಸಿದರು.

ಕುರುಡಿಹಳ್ಳಿ ಪುಣ್ಯಕೋಟಿ ಸರ್ಕಾರಿ ಗೋಶಾಲೆ ಜಮೀನಿನಲ್ಲಿ ನರೇಗಾದಡಿ ನೆಲಸಮತಟ್ಟು ಮಾಡಬೇಕಾಗಿದೆ. ಹಸಿರು ಮೇವು ಬೆಳೆ ಯಬಹುದು. ನರೇಗಾದಡಿ ಹೆಚ್ಚುವರಿಯಾಗಿ 100 ಜಾನುವಾರುಗಳಿಗೆ ಶೆಡ್ ನಿರ್ಮಿಸಬೇಕಿದೆ ಎಂದು ಗೋ ಶಾಲೆ ಉಸ್ತುವಾರಿ ಅಧಿಕಾರಿ ಹೇಳಿದರು. ಜಿಲ್ಲಾ ಪ್ರಾಣಿದಯಾ ಸಂಘದ ನವೀಕರಣಕ್ಕೆ ಸಭೆಯಲ್ಲಿ ಅನುಮತಿ ನೀಡಲಾಯಿತು. ಎಎಸ್‌ಪಿ ಎಸ್.ಜೆ. ನಗರಸಭೆ ಪೌರಾಯುಕ್ತೆ ಎಂ. ರೇಣುಕಾ, ಮುಖ್ಯಪಶುವೈದ್ಯಾಧಿಕಾರಿ ಡಾ.ಎನ್. ಗಿರಿರಾಜ್ ಮತ್ತಿತರರು ಇದ್ದರು.