ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ಡಿಎಸ್‌ಎಸ್ ಕಾರ್ಯಕರ್ತರು ಪರಿಶಿಷ್ಟರಿಗೆ ಮೀಸಲಿರಿಸಿದÀ ಅನುದಾನ ಬಿಡುಗಡೆಗೆ ಒತ್ತಾಯಿಸಿದರು. ಕೆ.ಸಿ.ವಸಂತ್‌ಕುಮಾರ್, ದೊಡ್ಡಯ್ಯ, ಜಯರಾಮಯ್ಯ, ಕೆಂಚಪ್ಪ, ವೀರಯ್ಯ, ಭೀಮಯ್ಯ, ಅಣ್ಣಯ್ಯ ಮತ್ತಿತರರಿದ್ದರು. 
ಜಿಲ್ಲೆ

ಅನುದಾನ ಬಿಡುಗಡೆಗೆ ಡಿಎಸ್‌ಎಸ್ ಒತ್ತಾಯ

ಚಿಕ್ಕಮಗಳೂರು: ಪರಿಶಿಷ್ಟರ ಸೌಲಭ್ಯಗಳಿಗೆ ಮೀಸಲಿರಿಸಿರುವ ಹಣವನ್ನು ನಿಗಧಿತ ಅವಧಿಯಲ್ಲಿ ಕೂಡಲೇ ಬಿಡುಗಡೆಗೊಳಿಸಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಡಿಎಸ್‌ಎಸ್ ಕಾರ್ಯಕರ್ತರು ಶನಿವಾರ ಡಿಸಿ ಮೀನಾನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಪರಿಶಿಷ್ಟರ ಏಳಿಗೆಗಾಗಿ ಸೌಲಭ್ಯ ಒದಗಿಸಲು ಅಂಬೇಡ್ಕರ್, ಆದಿಜಾಂಬವ, ವಾಲ್ಮೀಕಿ ಹಾಗೂ ಬೋವಿ ನಿಗಮಗಳು ಅಸ್ಥಿತ್ವಲ್ಲಿದ್ದು ಪರಿಶಿಷ್ಟ ಅಭಿವೃದ್ಧಿಗೆ ವಾರ್ಷಿಕವಾಗಿ ಕೋಟಿಗಟ್ಟಲೇ ಹಣ ಕಳೆದ ಒಂದು ವರ್ಷದಿಂದ ಫಲಾನುಭವಿಗಳಿಗೆ ಲಭಿಸಿಲ್ಲ ಎಂದು ದೂರಿದರು.

ಈ ವೆಳೆ ಮಾತನಾಡಿದ ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತ್‌ಕುಮಾರ್, ಜಿಲ್ಲೆಯಲ್ಲಿ ಕಳೆದ ಮೇ, ಜೂನ್ ಹಾಗೂ ಜುಲೈನಲ್ಲಿ ಸುಮಾರು ೨೦ ಬೋರೆವೇಲ್ ಕೊರೆಯಲಾಗಿದೆ. ಆದರೆ ಹಿಂದಿನ ವರ್ಷಗಳ ಕೆಲಸ ನಿರ್ವಹಿಸುತ್ತಿರುವ ಏಜೆನ್ಸಿಗಳಿಗೆ ನವೆಂಬರ್ ತಿಂಗಳಿAದ ಹಣ ಬಿಡುಗಡೆಗೊಳಿಸಿಲ್ಲ ಎಂದು ಹೇಳಿದರು.

ಫಲಾನುಭವಿಗಳು ಬೋರೆವೆಲ್‌ಗಳಿಗೆ ಅಂತಿಮವಾಗಿ ವಿದ್ಯುತ್ ನೀಡಿ ನೀರು ಸಂಗ್ರಹಿಸುವ ಕಾಮಗಾರಿ ಅಪೂರ್ಣವಾಗಿದೆ. ಈ ವಿಚಾರವಾಗಿ ಏಜೆನ್ಸಿಗಳು ಹಾಗೂ ಫಲಾನುಭವಿಗಳಿಗೆ ಜಗಳ ಏರ್ಪಡುತ್ತಿದೆ. ಇದರಿಂದ ಬೇಸತ್ತಿರುವ ಏಜೆನ್ಸಿಗಳು ಈ ರೀತಿ ಕೆಲಸವನ್ನು ಕೈಗೊಳ್ಳಲು ಹಿಂದೇಟು ಹಾಕಿದರೆ, ಫಲಾನುಭವಿಗಳು ಹಿಡಿಶಾಪ ಹಾಕುತ್ತಿದ್ದಾರೆ ಎಂದರು.

ಇನ್ನೊAದೆಡೆ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಸರಾಗವಾಗಿ ವಾರ್ಷಿಕವಾಗಿ ಅನುಮೋದನೆಗೊಂಡ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ. ಪರಿಶಿಷ್ಟರ ಅಭಿವೃದ್ಧಿ ನಿಗಮದಲ್ಲಿ ೨ ವರ್ಷಗಳಿಂದ ನಿರಂತರವಾಗಿ ಅನುದಾನ ಬಿಡುಗಡೆಯಾಗದೆ ಕಾಮಗಾರಿಗಳು ಬಾಕಿ ಉಳಿದಿವೆ ಎಂದು ಹೇಳಿದರು.

ಪರಿಶಿಷ್ಟರು ಭೂಮಿ ಹೊಂದುವ ಭೂ ಒಡೆತನ ಯೋಜನೆ ೫ ವರ್ಷಗಳಿಂದ ಕಾರ್ಯಚಟುವಟಿಕೆ ನಡೆಯದೇ ನಿಂತಿದೆ. ಫಲಾನುಭವಿಗಳು ಭೂಮಿ ಸಿಗುವುದೆಂದು ಭೂ ಮಾಲೀಕರಲ್ಲಿ ಅಲ್ಪಸ್ವಲ್ಪವಿದ್ಧ ಹಣವನ್ನು ನೀಡಿ ಕರಾರು ಪತ್ರ ಮಾಡಿಕೊಂಡು ಜಾತಕ ಪಕ್ಷಿಯಂತೆ ನಿಗಮದ ಹಣಕ್ಕಾಗಿ ಕಾಯುತ್ತಿದ್ದಾರೆ. ಒಂದೆಡೆ ಕೊಟ್ಟ ಹಣವು ಇಲ್ಲ, ಭೂಮಿಯು ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಪರಿಶಿಷ್ಟ ಯೋಜನೆಗಳು ನಿಗಧಿತ ಸಮಯದಲ್ಲಿ ಫಲಾನುಭವಿ ಹಾಗೂ ಏಜೆನ್ಸಿಗಳಿಗೆ ಸಿಗದೇ ನೇರವಾಗಿ ಗ್ಯಾರಂಟಿ ಯೋಜನೆಗಳಿಗೆ ಉಪಯೋಗವಾಗುತ್ತಿದೆ ಎಂಬ ಸಂದೇಹ ವ್ಯಕ್ತವಾಗುತ್ತಿದೆ. ಹೀಗಾಗಿ ಪರಿಶಿಷ್ಟರ ಹಣ ನಿಗಧಿತ ಸಮಯಕ್ಕೆ ಒದಗಿಸಿ, ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ಮುಖಂಡರಾದ ದೊಡ್ಡಯ್ಯ, ಜಯರಾಮಯ್ಯ, ಕೆಂಚಪ್ಪ, ವೀರಯ್ಯ, ಭೀಮಯ್ಯ, ಅಣ್ಣಯ್ಯ, ಮಂಜಯ್ಯ, ರಂಗಯ್ಯ, ಧರ್ಮೇಶ್ ಉಪಸ್ಥಿತರಿದ್ದರು.