ರಾಯಚೂರು ತಾಲೂಕಿನ ಶಾಖವಾದಿ ಗ್ರಾಪಂನಲ್ಲಿ ಕರ ವಸೂಲಿ ಮತ್ತು ೧೫ನೇ ಹಣಕಾಸು ಅನುದಾನ ದರ‍್ಬಳಕೆ ಆರೋಪದಡಿ ಗ್ರಾಪಂನ ಪಿಡಿಓ ವಿಜಯಕುಮಾರರನ್ನು ಅಮಾನತ್ತು ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಪಂನಲ್ಲಿ ೧೫ನೇ ಹಣಕಾಸು ಅನುದಾನದಾನದಲ್ಲಿ ಪಿಡಿಓ ವಿಜಯ ಕುಮಾರ ಯಾವುದೇ ಕಾಮಗಾರಿ ನಡೆಸದೆ ಒಂದೇ ದಿನ ೨೦ ಲಕ್ಷ ರೂ.ನೇರವಾಗಿ ಹಣ ರ‍್ಗವಣೆ ಹಾಗೂ ೧.೬೨ ಲಕ್ಷ ರೂ.ಕರವಸೂಲಿ ಹಣವನ್ನು ೦೯ ಗ್ರಾಪಂ ಸದಸ್ಯರಿಗೆ ಕಾಮಗಾರಿ ನಡೆಸದೆ ಹಣ ಹಂಚಿಕೆ ಮಾಡಿರುವ ಕುರಿತು ಜಿಲ್ಲಾ ಪಂಚಾಯಿಯಿಗೆ ದೂರು ಬಂದಿದ್ದು,
ಕೂಡಲೇ ತಾಪಂ ಇಓ ಚಂದ್ರಶೇಖರ ಪವಾರ ನೇತೃತ್ವದಲ್ಲಿ ತನಿಖೆ ಪ್ರಾರಂಭ ಮಾಡಿದ್ದು, ಆದರೆ ತನಿಖೆಯಲ್ಲಿ ಯಾವುದೇ ಕಾಮಗಾರಿ ಮಾಡದೆ ಅನುದಾನ ದರ‍್ಬಳಕೆ ಮಾಡಿಕೊಂಡಿರುವುದು ಸಾಬೀತಾಗಿರುವುದರಿಂದ ವರದಿಯಾದರಿಸಿ ಜಿಪಂ ಸಿಇಓ ಈಶ್ವರ್ ಕುಮಾರ ಕಾಂದೊ ಅವರು ತಾಪಂ ಇಓ ವರದಿ ಮೇರೆಗೆ ಸೆ.೧ ರಂದು ಅಮಾನತ್ತು ಮಾಡಿ ಅದೇಶಿಸಿದ್ದಾರೆ.