ಜಿಲ್ಲೆ

ಅನುದಾನ ತಂದು ಕೆಲಸ ಮಾಡಿಸಿದ್ದೇನೆ

Hassan

ಬೇಲೂರು: ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಇಲ್ಲದಿದ್ದರೂ ಸುಮಾರು 1800 ಕೋಟಿ ರೂ. ಅನುದಾನ ತಂದು ಕೆಲಸ ಮಾಡಿಸಿದ್ದೇನೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಪಟ್ಟಣ ಸಮೀಪದ ಹಳೇ ಉತ್ಪಾತನಹಳ್ಳಿಯ ಮಾರುತಿ ನಗರದಲ್ಲಿ ಭಾನುವಾರ ರಸ್ತೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿದರು. ಈ ಭಾಗದ ಜನರು ಎಂದಿಗೂ ಹಣ ಮತ್ತು ಜಾತಿಯ ದುಂಬಾಲಿಗೆ ಬಿದ್ದು ಮತ ನೀಡಿದವರಲ್ಲ, ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರ ಮೇಲೆ ಇರುವ ಅಭಿಮಾನದಿಂದ ಅಭ್ಯರ್ಥಿ ಯಾರೇ ಆದರೂ ಗೆಲ್ಲಿಸಿ ಕಳುಹಿಸಿದ್ದಾರೆ. 2023ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡ ಬಿ.ಡಿ.ಚಂದ್ರೇಗೌಡ ಮಾತನಾಡಿದರು. ಸನ್ಯಾಸಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್, ಸನ್ಯಾಸಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಮಾರ್, ಜೆಡಿಎಸ್ ತಾಲೂಕು ಯುವಘಟಕದ ಅಧ್ಯಕ್ಷ ಬಿ.ಸಿ.ಉಮೇಶ್, ಜೆಡಿಎಸ್ ಕಸಬಾ ಹೋಬಳಿ ಘಟಕದ ಅಧ್ಯಕ್ಷ ಕುಮಾರ್, ಜೆಡಿಎಸ್ ಮುಖಂಡರಾದ ದೊಡ್ಡವಿರೇಗೌಡ, ಚಂದು, ಮಾಳೇಗೆರೆ ಬಸವರಾಜು, ಸನ್ಯಾಸಿಹಳ್ಳಿ ವಾಸು, ಗ್ರಾಮಸ್ಥರಾದ ಹನುಮಂತೇಗೌಡ ಇತರರು ಇದ್ದರು.