ಜಿಲ್ಲೆ

ಅನುಕಂಪ ಸಹಾನುಭೂತಿ ಪ್ರತೀಕವೇ ನಿಜವಾದ ಕ್ರಿಸ್‌ಮಸ್

Dharwad

ವಿಜಯವಾಣಿ ಸುದ್ದಿಜಾಲ ಧಾರವಾಡ


ಸಮಾಜದಿಂದ ತುಳಿತಕ್ಕೊಳಗಾದ ಬಡವರ, ದಿಕ್ಕಿಲ್ಲದವರ, ಅನಾಥರ ಬಗ್ಗೆ ಅನುಕಂಪ ಸಹಾನುಭೂತಿ ನಮಗಿದೆ. ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ನಾವು ಅವರಿಗೆ ಸಹಾಯ ಹಸ್ತ ಚಾಚಿದಾಗಲೇ ಹಬ್ಬಕ್ಕೆ ನಿಜ ಅರ್ಥ ಸಿಗಲಿದೆ ಎಂದು ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ನೂತನ ಬಿಷೋಪ್ ರೈಟ್ ರೆ. ಹೇಮಚಂದ್ರಕುಮಾರ ಅಭಿಪ್ರಾಯಪಟ್ಟರು.
ಧಾರವಾಡ ಹಳಿಯಾಳ ರಸ್ತೆ ಬಳಿಯ ಆರ್‌ಎಲ್‌ಟಿಸಿ ಸಭಾಭವನದಲ್ಲಿ ಕರ್ನಾಟಕ ಉತ್ತರ ಸಭಾ ಪ್ರಾಂತ ಬಾಸೆಲ್ ಮಿಶನ್ ಉಚ್ಚ ಶಿಕ್ಷಣ ಸಂಸ್ಥೆ, ಬಾಸೆಲ್ ಮಿಶನ್ ಪ್ರೈಮರಿ ಎಜುಕೇಶನ್ ಸೆಂಟರ್ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಸಾಮೂಹಿಕ ಕ್ರಿಸ್‌ಮಸ್ ಆಚರಣೆಯಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉತ್ತರ ಸಭಾ ಪ್ರಾಂತದ ಬಿಷೋಪ್ ರೈ.ರೆ. ಮಾರ್ಟಿನ್ ಬೋರ್ಗಾಯಿ ಮಾತನಾಡಿ, ಕ್ರಿಸ್‌ಮಸ್ ಶಾಂತಿ, ಕರುಣೆ, ಧೀನತೆಯ ಪ್ರತೀಕ. ಕೇವಲ ಒಂದು ದಿನದ ಆಚರಣೆಯಲ್ಲ. ದಿನಂಪ್ರತಿ ನಮ್ಮ ಜೀವನದ ಆಚಾರ ವಿಚಾರಗಳಿಂದ ಆಚರಣೆಯಾಗಲಿ ಎಂದುರು.
ನಿಕಟಪೂರ್ವ ಬಿಷೋಪ್ ರೈಟ್ ರೆ. ಡಾ. ಪಿ.ಜೆ.ಕೆ. ಬಲ್ಮಿ, ಪ್ರೇಮಾ ಬೋರ್ಗಾಯಿ, ಭಾರತಿ ಹೇಮಚಂದ್ರಕುಮಾರ. ರೆ. ರಾಜು ಮಂಗಳೂರ, ರಾಜ್ಯದ ಸುಮಾರು 8 ಜಿಲ್ಲೆಗಳ ಪಾದ್ರಿಗಳು, ಶಿಕ್ಷಕರು, ಇತರರು ಪಾಲ್ಗೊಂಡಿದ್ದರು.
ವಿಜಯಕುಮಾರ ದಂಡಿನ್ ಸ್ವಾಗತಿಸಿದರು. ಅನಿಲಕುಮಾರ ನಿಲುಗಲ್ ಹಾಗೂ ಸ್ಯಾಮುವೇಲ್ ಕ್ರಿಸ್ತವಸ್ತಾ ಬೈಬಲ್ ಪಠಣ ಮಾಡಿದರು. ಶಾರೋನ ಅಳಗೋಡಿ, ಸಂಜಯ ಗುಡಸಲಮನಿ, ಸಂಗೀತಾ ಪ್ರಭಾಕರ ಹಾಗೂ ಡಾ. ಪ್ರೇಮಲತಾ ಕೋಟಿ ನಿರೂಪಿಸಿದರು. ಸತ್ಯಬಾಬು ಸ್ಯಾಮುವೇಲ್ ವಂದಿಸಿದರು.