ಜಿಲ್ಲೆ

ಅನಿತಾರಮೇಶ್ ದುರ್ಗ ನಗರಸಭೆ ನೂತನ ಅಧ್ಯಕ್ಷೆ

ಚಿತ್ರದುರ್ಗ: ನಗರಸಭೆ ನೂತನ ಅಧ್ಯಕ್ಷರಾಗಿ 20ನೇ ವಾರ್ಡ್‌ನ ಎಂ.ಪಿ. ಅನಿತಾ ರಮೇಶ್ ಅವಿರೋಧ ಆಯ್ಕೆಯಾಗಿದ್ದಾರೆ.

ನಗರಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎಸಿ ಮಹಮ್ಮದ್ ಜಿಲಾನಿ ಖುರೇಷಿ ಅವರು ನೂತನ ಅಧ್ಯಕ್ಷರ ಆಯ್ಕೆ ಪ್ರಕಟಿಸಿದರು.

ಅನಿತಾ ಅವರು ಸಲ್ಲಿಸಿದ್ದ ಎರಡೂ ನಾಮಪತ್ರಗಳು ಸಿಂಧುವಾಗಿದ್ದು, ನಾಮಪತ್ರ ಹಿಂಪಡೆಯುವ ಅವಧಿ ಪೂರ್ಣವಾದ ಬಳಿಕ ಅವರ ಆಯ್ಕೆ ಘೋಷಿಸಲಾಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾದ ನಂತರ ಈಗಾಗಲೇ ಇಬ್ಬರು ಮಹಿಳೆಯರು ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದಾರೆ.

ಒಬ್ಬರು ಸಂಸದರು, ಶಾಸಕರ ಸಹಿತ 37 ಸದಸ್ಯ ಬಲದ ಈ ನಗರಸಭೆ ಅಧ್ಯಕ್ಷರ ಚುನಾವಣೆಗೆ 29 ಸದಸ್ಯರು ಹಾಜರಾಗಿದ್ದರು.ಪೌರಾಯುಕ್ತೆ ಎಸ್. ಲಕ್ಷ್ಮೀ ಇದ್ದರು.

ಅಧ್ಯಕ್ಷೆ ಅನಿತಾ ಅವರಿಗೆ ಅಧಿಕಾರಿಗಳು, ಸದಸ್ಯರು, ಹಿತೈಷಿಗಳು ಶುಭ ಹಾರೈಸಿದರು. ಚುನಾವಣೆ ನಂತರ ಅನಿತಾ ಹಾಗೂ ಅವರ ಪತಿ ರಮೇಶ್ ಅವರಿದ್ದ ತೆರೆದ ಜೀಪಿನ ಮೆರವಣಿಗೆ ನಗರದ ವಿವಿಧ ಬಡಾವಣೆ ಹಾಗೂ 20ನೇ ವಾರ್ಡ್‌ನಲ್ಲಿ ಸಾಗಿತು. ವಿವಿಧ ಜಾನಪದ ವಾದ್ಯಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.