ಸುಂಟಿಕೊಪ್ಪ: ನಾಕೂರು ಶಿರಂಗಾಲ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಯುವತಿಯೊಬ್ಬಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಧನಸಹಾಯ ನೀಡಲಾಗಿದೆ.
ಕಾನ್‌ಬೈಲ್ ತೋಟದ ಲೈನ್‌ಮನೆಯಲ್ಲಿ ವಾಸವಾಗಿರುವ ಅಯ್ಯಪ್ಪ ಮತ್ತು ರತ್ನಾ ದಂಪತಿ ಪುತ್ರಿ ಹರ್ಷಿತಾ ನರದೌರ್ಬಲ್ಯದಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಲು ನಾಕೂರು ಶಿರಂಗಾಲ ಫ್ರೆಂಡ್ಸ್ ಯೂತ್ ಕ್ಲಬ್‌ನ ಪದಾಧಿಕಾರಿಗಳು ಗ್ರಾಮಸ್ಥರಿಂದ 30,350 ರೂ. ವಂತಿಗೆ ಸಂಗ್ರಹಿಸಿ ನೀಡಿದರು.
ನಾಕೂರು ಶಿರಂಗಾಲ ಫ್ರೆಂಡ್ಸ್ ಯೂತ್ ಕ್ಲಬ್ ಕಾರ್ಯದರ್ಶಿ ಶಂಕರನಾಯಣ, ಸದಸ್ಯ ದಯಾನಂದ, ಎಕೆಜಿ ಟಿಂಬರ್ ಬಾಯ್ಸ ಮಾಲೀಕ ಗಣೇಶ್, ಗ್ರಾಮಸ್ಥರಾದ ಶಾಂತಪ್ಪ, ಎಚ್.ಬಿ.ಪ್ರಕಾಶ ಮತ್ತಿತರರು ಇದ್ದರು.