ಚಾಮರಾಜನಗರ: ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೇದೆಯೊಬ್ಬರು ಅನಾರೋಗ್ಯದಿಂದ ಗುರುವಾರ ಮೃತಪಟ್ಟಿದ್ದು, ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಂತ್ಯಕ್ರಿಯೆಯಲ್ಲಿ ಹೈಡ್ರಾಮಾ ನಡೆದಿದೆ.
ತಾಲೂಕಿನ ನರಸಮಂಗಲ ಗ್ರಾಮದ ಗುರುಪ್ರಸಾದ್ (35) ಮೃತ ದುರ್ದೈವಿ. ಇವರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕುಂದು ಗೆರೆ ಗ್ರಾಮದ ಯುವತಿಯನ್ನು ಕೇವಲ ೨ ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೇ ಅನಾರೋಗ್ಯ ಸಮಸ್ಯೆಯಿಂದ ಗುರುವಾರ ಮೃತಪಟ್ಟಿದ್ದು, ಅಂತ್ಯಕ್ರಿಯೆಯಲ್ಲಿ ಆಸ್ತಿ ವಿವಾದದ ವಿಚಾರ ಭುಗಿಲೆದ್ದಿದೆ.
ಈ ಸಂದರ್ಭದಲ್ಲಿ ಮೃತ ಗುರುಪ್ರಸಾದ್ ಸಂಬಂಧಿಕರು ಮತ್ತು ಪತ್ನಿ ಸಂಬಂಧಿಕರಿಗೆ ಮಾತಿನ ಚಕಾಮಕಿ ಉಂಟಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಿಕರನ್ನು ಸಮಾಧಾನಪಡಿಸಿದರು. ಬಳಿಕ ಸ್ವಗ್ರಾಮದಲ್ಲಿ ಗುರುಪ್ರಸಾದ್ ಅಂತ್ಯಕ್ರಿಯೆ ಪೊಲೀಸ್ ಗೌರವಗಳೊಂದಿಗೆ ನೆರವೇರಿಸಲಾಯಿತು.