ಜಿಲ್ಲೆ

ಅನಾಮಧೇಯ ಸಂದೇಶಗಳಿಗೆ ಸ್ಪಂದಿಸಬೇಡಿ

ಶಿಕಾರಿಪುರ: ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ನಲ್ಲಿ ಪಿ.ಎಂ.ಕಿಸಾನ್ ಯೋಜನಾ ಎಪಿಕೆ ಪಿ.ಎಂ.ಕಿಸಾನ್, ಈಕೆವೈಸಿ ಅಪ್‌ಡೇಟ್ ಮತ್ತಿತರ ಹೆಸರಿನಲ್ಲಿ ಅನಾಮಧೇಯ ವ್ಯಕ್ತಿಗಳಿಂದ ಮೇಸಜ್ ಬರುತ್ತಿದ್ದು, ಈ ಎಪಿಕೆ ೈಲ್‌ಗಳನ್ನು ತೆರೆಯಲು ಪ್ರಯತ್ನಿಸಬೇಡಿ ಎಂದು ಸಹಾಯಕ ಕೃಷಿ ನಿರ್ದೇಶಕ ಕಿರಣ್‌ಕುಮಾರ್ ಹರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೆಲವೊಂದು ರೈತರು ಪಿ.ಎಂ ಕಿಸಾನ್ ಯೋಜನೆಗೆ ಸಂಬಂಧಿಸಿರಬಹುದು ಎಂದು ತೆರೆದಾಗ ಅವರ ೆನ್ ಹ್ಯಾಕ್ ಆಗುವುದು, ಹ್ಯಾಂಗ್ ಆಗುವುದು ಅಥವಾ ಬ್ಯಾಂಕ್‌ನಿಂದ ಹಣ ಕಳೆದುಕೊಳ್ಳುವುದೂ ಸೇರಿದಂತೆ ಅನೇಕ ಸಮಸ್ಯೆಗಳು ನಮ್ಮ ಕೃಷಿ ಕಚೇರಿಯ ಗಮನಕ್ಕೆ ಬಂದಿರುತ್ತವೆ. ಆದ್ದರಿಂದ ಈ ರೀತಿ ಮೆಸೇಜ್‌ಗಳನ್ನು ಕೂಡಲೇ ಡಿಲಿಟ್ ಮಾಡಬೇಕು ಮತ್ತು ರೈತರು ಜಾಗರೂಕರಾಗಿರಬೇಕೆಂದು ತಿಳಿಸಿದ್ದಾರೆ.