ಜಿಲ್ಲೆ

ಅನಾದಿಕಾಲದ ಆಯುರ್ವೇದ ಇಂದು ವಿಶ್ವವ್ಯಾಪ್ತಿ

ಬಾಗಲಕೋಟೆ:  ಭಾರತೀಯ ಪರಂಪರೆಯಿಂದ ಸಾವಿರಾರು ವರ್ಷಗಳ ಹಿಂದೆ ಬಳಸಲ್ಪಡುತ್ತಿದ್ದ ಆಯುರ್ವೇದ ಇಂದು ವಿಶ್ವವ್ಯಾಪ್ತಿ ಸ್ಥಾನಮಾನ ಪಡೆದಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಜಿ.ಪಂ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆಯುಷ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಯುರ್ವೇದ ಔಷಧಿಯಿಂದ ದೈಹಿಕ, ಮಾನಸಿಕ ಆರೋಗ್ಯ ಹೊಂದುವದರ ಜೊತೆಗೆ ಆತ್ಮವಿಶ್ವಾಸದ ಬಲ ಹೆಚ್ಚಿಸಲು ಸಹಕಾರಿಯಾಗಿದೆ. ಇದನ್ನರಿತ ಪ್ರಧಾನ ಮಂತ್ರಿಗಳು ಈ ಅಮೂಲ್ಯವಾದ ಆಯುರ್ವೇದ ಔಷಧ ಹಾಗೂ ಯೋಗವನ್ನು ಪ್ರಪಂಚಕ್ಕೆ ಪರಿಚಯಿಸುವ ಕಾರ್ಯವನ್ನು ಮಾಡಿದ್ದಾರೆ ಎಂದರು.

ಆಯುರ್ವೇದದಲ್ಲಿ ಬಾಹ್ಯರೋಗಗಳಿಗೆ ಆಸ್ಪದವಿಲ್ಲ. ಇಂದು ಪ್ರಚಲಿತದಲ್ಲಿರುವ ಅಲೋಪತಿ ಔಷಧಿಗಳು ಬೇಗ ಪರಿಣಾಮಕಾರಿ ಆದರೂ ಬಾಹ್ಯರೋಗ ಹರಡುವ ಸಾಧ್ಯತೆ ಸಾಧ್ಯತೆ ಇದೆ. ಆ ದೃಷ್ಠಿಯಿಂದ ಆಯುರ್ವೇದ ರೋಗ ನಿವಾರಣೆಯಲ್ಲಿ ನಿದಾನವಾದರು ಶಾಸ್ವತ ಪರಿಹಾರ ನೀಡುತ್ತದೆ. ಇಂತಹ ಅದ್ಬುತವಾದ ಮನೆ ಮನೆ ತಲುಪಿಸುವ ಕಾರ್ಯ ಇಲಾಖೆಯಿಂದ ಆಗಬೇಕು ಎಂದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ ಭಾರತೀಯ ಜೀವನಶೈಲಿಯಲ್ಲಿ ಆಹಾರ ಪ್ರಮುಖ ಪಾತ್ರ ವಹಿಸಿದ್ದು, ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೇ ಶುಂಠಿ, ಬೆಳ್ಳುಳ್ಳಿ, ಅರಿಶಿಣದಂತಹ ಔಷಧಿಯುಕ್ತ ಪದಾರ್ಥಗಳನ್ನು ಬಳಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಆದರೆ ಇಂದು ಹಿತ್ತಲಗಿಡ ಮದ್ದಲ್ಲ ಎಂಬಂತಾಗಿದ್ದು, ಜನ ಅಲೋಪತಿಗೆ ಮೊರೆ ಹೋಗುತ್ತಿದ್ದಾರೆ. ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಹಲವಾರು ಔಷಧಿ ಗುಣಗಳಿದ್ದು, ಬಳಸುವ ಪದ್ದತಿ ತಿಳಿಯತ್ತಿಲ್ಲವೆಂದರು.

ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ ಮಾತನಾಡಿ ಯೋಗ, ಜ್ಞಾನ ಹಾಗೂ ಆಯುರ್ವೇದ ಔಷಧಿಯಿಂದ ಉತ್ತಮವಾದ ಆರೋಗ್ಯ ದೊರೆಯುವದೆಂದು ಹಿಂದಿನಿಂದಲೂ ಕೇಳುತ್ತಿದ್ದೇವೆ. ಆದರೆ ಅದನ್ನು ಮುಂದುವರಿಸಿಕೊಂಡು ಹೋಗಲು ಹಿಂಜರಿಕೆಯಾಗುತ್ತಿದ್ದು, ಉತ್ತಮ ಜೀವನಕ್ಕಾಗಿ ಆಯುಷ ಪದ್ದತಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ಮಹಿಳೆಯರ ಸಬಲೀಕರಣಕ್ಕಾಗಿ ಆಯುಷ ಇಲಾಖೆ ಹೊಸ ಜೀವನ ವಿಧಾನ ಒಂದನ್ನು ರೂಪಿಸಿದ್ದು, ಅತೀ ಕ್ರೀಯಾತ್ಮಕವಾದ ಮಹಿಳೆಯ ಜೀವನದ ಹಾಗೂ ಸಂತಾನೋತ್ಪತ್ತಿಗೆ ಅನುಕೂಲಕರವಾದ ಅವಧಿಯಲ್ಲಿ ಗರ್ಭಿಣಿ ಹಾಗೂ ಭಾಣಂತಿ ತಾತ್ನದ ಅನುಭವಿಸುವಾಗ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಅನೇಕ ಬದಲಾವಣೆಗಳನ್ನು ಹೊಂದಿತ್ತಿರುವದರಿಂದ ಆಯುವೇಧವು ಈ ಎಲ್ಲ ಹಂತದಲ್ಲಿ ಮಹಿಳೆಗೆ ಸ್ವಸ್ಥ ಆರೋಗ್ಯ ನೀಡುತ್ತದೆ ಎಂದರು. ಇದೇ ಸಂದರ್ಭದಲ್ಲಿ ದೀಪಾವಳಿ ಕುರಿತಾದ ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಗೀತೆಯನ್ನು ಹಾಡಿದರು.

ಪ್ರಾರಂಭದಲ್ಲಿ ಜಿಲ್ಲಾ ಆಯುಷ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ ಮಾತನಾಡಿ ಭಾರತ ಸರಕಾರದ ಆಯುಷ ಮಂತ್ರಾಲಯ ಧನವಂತರಿ ಜಯಂತಿ ದಿನವನ್ನು ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ಘೋಷಿಸಿದ್ದು, ಈ ಭಾರಿ ಸಮಗ್ರ ಆರೋಗ್ಯಕ್ಕಾಗಿ ಪ್ರತಿದಿನ ಪ್ರತಿಯೊಬ್ಬರಿಗೂ ಆಯುರ್ವೇದ ಎಂಬವದಾಗಿದೆ ಎಂದರು. ಈ ಸಂದರ್ಭದಲ್ಲಿ ಆಯುಷ ಪದ್ದತಿಯ ಪ್ರಚಾರದ ಪೋಸ್ಟರಗಳನ್ನು ಬಿಡುಗಡೆಗೊಳಿಸಲಾಯಿತು. ಬಾದಾಮಿಯ ಡಾ.ಸಂಗೀತ ಬಳಗಾನೂರ ಹಾಗೂ ಡಾ.ವಿಜಯಾ ಸಂಗದ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಆಯುಷ ಇಲಾಖೆಯ ತಾಲೂಕಾ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಾಂತ ರಕ್ಕಸಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.