ಯಾದಗಿರಿ: ಮನುಷ್ಯ ಸಂಘಜೀವಿಯಾಗಿದ್ದು, ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನನ್ನ ಕೊಡುಗೆ ಏನಿದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಮಕ್ಕಳತಜ್ಞ ಡಾ. ಪ್ರಶಾಂತ ಭಾಸುತ್ಕರ್ ಸಲಹೆ ನೀಡಿದರು.
ಭಾನುವಾರ ನಗರದ ಎಪಿಎಂಸಿ ಹಿಂಭಾಗದಲ್ಲಿನ ಗ್ರೇಸ್ ಕರುಣಾಲಯ ಅನಾಥಾಶ್ರಮದಲ್ಲಿ ನ್ಯೂಟ್ರಿಷನ್ ಹರ್ಬಲ್ ಕ್ಲಬ್ನಿಂದ ಅನಾಥ ಮಕ್ಕಳಿಗೆ ಉಚಿತ ವಿವಿಧ ಪರಿಕರಗಳ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಷ್ಟದ ಪರಿಸ್ಥಿತಿಯಲ್ಲಿರುವವರಿಗೆ ಸಹಾಯಹಸ್ತ ಚಾಚುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ ಎಂದರು.
ತಮ್ಮದಲ್ಲದ ತಪ್ಪಿಗೆ ಜನಿಸುತ್ತಲೇ ಅನಾಥರು ಎಂಬ ಹಣೆಪಟ್ಟಿ ಕಟ್ಟಿಕೊಂಡ ಮಕ್ಕಳಿಗೆ ಆಥರ್ಿಕವಾಗಿ ಸ್ಥಿತಿವಂತರಿದ್ದವರು ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು. ಹುಟ್ಟು ದಾರಿದ್ರೃವಾದರೂ ಸಾವು ಚರಿತ್ರೆಯಾಗಬೇಕು ಎಂಬ ನಾಣ್ನುಡಿಯಂತೆ ಅನಾಥ ಮಕ್ಕಳನ್ನು ಇತರೇ ಎಲ್ಲ ಮಕ್ಕಳಂತೆ ಸಮನಾಗಿ ನೋಡಿಕೊಂಡು ಅವರ ಭವಿಷ್ಯ ಉಜ್ವಲಗೊಳ್ಳುವಂತೆ ಮಾಡಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಕ್ಲಬ್ನ ಮುಖ್ಯಸ್ಥ ಪವನ್ ಸಾಲೆ ಮಾತನಾಡಿ, ನಮ್ಮಲ್ಲಿರುವುದನ್ನ ತೊಂದರೆಯಲ್ಲಿರುವವರಿಗೆ ಹಂಚುವುದರಲ್ಲಿ ಸಾಕಷ್ಟು ತೃಪ್ತಿ ಇದೆ. ಹೀಗಾಗಿ ಕ್ಲಬ್ ಎಲ್ಲ ಸದಸ್ಯರು ಸೇರಿ ಈ ಅನಾಥಾಶ್ರಮಕ್ಕೆ ಅಲ್ಪ ಪ್ರಮಾಣದ ಸೇವೆ ಮಾಡಿದ್ದೇವೆ ಎಂದು ತಿಳಿಸಿದರು. ಮಕ್ಕಳಿಗೆ ಅಗತ್ಯವಿರುವ ಬೆಡ್ಶಿಟ್, ರ್ಯಾಕ್, ಅಕ್ಕಿ, ನೋಟ್ಬುಕ್ ಇನ್ನಿತರ ವಸ್ತುಗಳನ್ನು ವಿತರಿಸಲಾಯಿತು.
ಆಶ್ರಮದ ಮುಖ್ಯಸ್ಥ ಡಾ. ಪರಶುರಾಮ, ರಾಜಶೇಖರ ಬೋರಗೆ, ನಾಗಪ್ಪ, ಸಿದ್ದಣ್ಣ, ಇಮ್ಯಾನುವೇಲ್, ಅಂಬಿಕಾ ಎಲ್. ಕುಲಕಣರ್ಿ, ಅಯ್ಯಪ್ಪ, ಸುಜಾತ ಅಯ್ಯಪ್ಪ, ಚಂದ್ರಕಲಾ, ಪವಿತ್ರಾ, ರಮಾದೇವಿ, ಸೋನಾ, ಸಾಯಿಬಣ್ಣ ಇತರರಿದ್ದರು.