ಜಿಲ್ಲೆ

ಅನಾಥ ಮಕ್ಕಳ ಮಾಹಿತಿ ತಿಳಿಸಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಕಾನೂನು ಬಾಹಿರ ದತ್ತು ಪ್ರಕ್ರಿಯೆ, ಮಕ್ಕಳ ಮಾರಾಟ ಅಪರಾಧ, ಬಾಲ ನ್ಯಾಯ ಕಾಯ್ದೆ ಅನ್ವಯ 5 ವರ್ಷಗಳ ವರೆಗೆ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಹೇಳಿದ್ದಾರೆ.

ಈ ಕೃತ್ಯದಲ್ಲಿ ಆಸ್ಪತ್ರೆಯವರೂ ಶಾಮೀಲಾಗಿದ್ದರೆ ಶಿಕ್ಷೆ ಅವಧಿ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳ ವರೆಗೆ ವಿಸ್ತರಣೆ ಆಗಲಿದೆ. ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳ ಮಾಹಿತಿ ಇದ್ದರೆ ಸಾರ್ವಜನಿಕರು ದೂರವಾಣಿ ಸಂಖ್ಯೆ 08194-295822ಗೆ ಸಂಪರ್ಕಿಸಬಹುದು. ಈ ನವೆಂಬರ್ ಅನ್ನು ಅಂತಾರಾ