ವಡಗೇರಾ: ತಂದೆ-ತಾಯಿ ಮಡಿಲಲ್ಲಿ ಆಟವಾಡುತ್ತ ಇರಬೇಕಿದ್ದ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥವಾಗಿದ್ದ ಬಾಲಕಿಯೊಬ್ಬಳಿಗೆ ಕೊನೆಗೂ ವಸತಿ ಶಾಲೆ ಸೂರು ಸಿಕ್ಕಿದೆ.
ಕ್ಯಾತನಾಳ ಗ್ರಾಮದ ಭೀಮಣ್ಣ ಮತ್ತು ಗಂಗಮ್ಮ ಮಡಿವಾಳ ದಂಪತಿ ಮಗಳು ಸಿದ್ದಮ್ಮ ಅವಳ ಕರುಳು ಹಿಂಡುವAಥ ಕಥೆ ಕೇಳಿದರೆ ಎಂಥವರಿಗೂ ಕಣ್ಣಂಚಿನಲ್ಲಿ ನೀರು ಜಿನುಗದೆ ಇರಲಾರದು. 12 ವರ್ಷದ ಬಾಲಕಿ ಸಿದ್ದಮ್ಮ ಊಟ, ನಿದ್ದೆ, ಆಟ-ಚೇಷ್ಟೆಗಳ ಮಧ್ಯೆ ಕಾಲ ಕಳೆಯಬೇಕಿತ್ತು. ಆದರೆ ವಿಧಿ ಈಕೆ ಬಾಳಲ್ಲಿ ತಂದ ಬಿರುಗಾಳಿಯಿಂದ ಅನಾಥವಾಗಬೇಕಾಯಿತು.
ತಂದೆ ಭೀಮಣ್ಣ ಮಡಿವಾಳ ಬಹುಕಾಲದ ಅನಾರೋಗ್ಯದಿಂದ ಮೃತಪಟ್ಟ ಕೆಲ ದಿನಗಳಲ್ಲೇ ತಾಯಿ ಗಂಗಮ್ಮ ಸಹ ಕ್ಯಾನ್ಸರ್‌ಗೆ ಬಲಿಯಾದಳು. ಹಾಲು ಕುಡಿದು ಆರದ ತುಟಿ, ತಂಬಿಟ್ಟಿನ ಗಲ್ಲದ ಒಬ್ಬಳೇ ಮಗಳು ಸಿದ್ದಮ್ಮ ನೀರಿನಿಂದ ಹೊರಬಿದ್ದ ಮೀನಿನಂತಾದಳು. ಕ್ಯಾತನಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ಪಾಸಾಗಿದ್ದ ಸಿದ್ದಮ್ಮಗೆ ಅನ್ನ, ನೀರು, ಸೂರಿನ ಕೊರತೆ ನಡುವೆ ಜೀವ ಉಳಿಸಿಕೊಳ್ಳುವುದೇ ದುಸ್ತರವಾಯಿತು. ಇನ್ನು ಓದುವ ಮಾತೆಲ್ಲಿಂದ? ಆಗ ನೆರವಿಗೆ ಬಂದz್ದೆÃ ಕರ್ನಾಟಕ ರೈತ ಸಂಘ.
ಹೆತ್ತವರ ಕಳೆದುಕೊಂಡು ಕಂಗಾಲಾಗಿದ್ದ ಪುಟಾಣಿ ಸಿದ್ದಮ್ಮ ವಿಷಯ ಅರಿಯುತ್ತಲೇ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಣಗೌಡ ಹಗರಟಗಿ ನೇತೃತ್ವದಲ್ಲಿ ಶಹಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಜಾಹೀದಾ ಬೇಗಂ ಅವರನ್ನು ಭೇಟಿಯಾಗಿ ಶಾಶ್ವತ ಸೂರು ಕಲ್ಪಿಸುವಂತೆ ಕೋರಲಾಯಿತು.
ಸಕಾರಾತ್ಮಕ ಸ್ಪಂದಿಸಿದ ಬಿಇಒ, ವಡಗೇರಾ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಗೆ ಸೇರಿಸುವ ವ್ಯವಸ್ಥೆ ಮಾಡಿದರು. ಇದರಿಂದ ಅಪ್ಪ-ಅಮ್ಮ ಇಲ್ಲದೆ ಅನಾಥವಾಗಿದ್ದ ಬಾಲಕಿಗೆ ಈಗ ಅನ್ನ, ನೀರು, ಸೂರು, ಶಿಕ್ಷಣ, ರಕ್ಷಣೆ ಎಲ್ಲವೂ ದೊರೆತಂತಾಗಿದೆ.
ಸಿದ್ದಮ್ಮಳನ್ನು ಶನಿವಾರ ಶಾಲೆಗೆ ಸೇರಿಸುವ ವೇಳೆ ವಸತಿ ಶಾಲೆ ಮುಖ್ಯಗುರು ಲಲಿತಾಬಾಯಿ ಎಚ್.ನಟೇಕಾರ, ಸಿಆರ್‌ಪಿ ಮಲಿಕೆಪ್ಪ ನಾಶಿ, ಕ್ಯಾತನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶರಣಪ್ಪ ಬಾಗಲಿ, ರೈತ ಸಂಘದ ಪ್ರಮುಖರಾದ ನೂರ್ ಅಹಮದ್, ಗುರುನಾಥ ರೆಡ್ಡಿ, ಶಿವಶರಣಪ್ಪ ಸಾಹುಕಾರ, ವೆಂಕೋಬಾ ಕಟ್ಟಿಮನಿ, ವಿದ್ಯಾಧರ ಜಾಕಾ, ಮಹಿಪಾಲರೆಡ್ಡಿ, ಶರಣು ಜಡಿ, ಹಳ್ಳೆಪ್ಪ ತೆಜೇರ, ಶಿವು ಗೋನಾಲ್ ಇತರರಿದ್ದರು.