ಚಿಕ್ಕಮಗಳೂರು ನಗರದಲ್ಲಿ ಅನಧಿಕೃತವಾಗಿ ಶಾಲೆಯನ್ನು ನಡೆಸುತ್ತಿರುವವರ ಬಗ್ಗೆ ಶಿಸ್ತು ಕ್ರಮ ಕೈಕೊಳ್ಳಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ವೇದಿಕೆ ಮುಖಂಡರುಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸೂಪರ್ಡೆಂಟ್ ಲತಾ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. 
ಜಿಲ್ಲೆ

ಅನಧಿಕೃತ ಶಾಲೆ ವಿರುದ್ಧ ಕ್ರಮಕ್ಕೆ ವೇದಿಕೆ ಒತ್ತಾಯ

ಚಿಕ್ಕಮಗಳೂರು: ನಗರದಲ್ಲಿ ಅನಧಿಕೃತವಾಗಿ ಶಾಲೆಯನ್ನು ನಡೆಸುತ್ತಿರುವವರ ಬಗ್ಗೆ ಶಿಸ್ತು ಕ್ರಮ ಕೈಕೊಳ್ಳಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ವೇದಿಕೆ ಮುಖಂಡರುಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸೂಪರ್ಡೆಂಟ್ ಲತಾ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ವೇದಿಕೆ ಅಧ್ಯಕ್ಷ ಕೋಟೆ ಸೋಮಣ್ಣ,  ನಗರದ ಹೃದಯ ಭಾಗ ದಲ್ಲಿರುವ ದೀಪಾನರ್ಸಿಂಗ್ ಹೋಂ ರಸ್ತೆ ಕೆಳಭಾಗದ ಬೈಪಾಸ್ ರಸ್ತೆಯಲ್ಲಿ ಹೊಸದಾಗಿ ಕಳೆದ ಎರಡು ತಿಂಗಳಿಂದ ದಿಡೀರ್ ಹೊಸ ಶಾಲೆಯು ವಾಣಿಜ್ಯ ಸಂಕೀರ್ಣದಲ್ಲಿ ನರ್ಸರಿಯಿಂದ ಎಂಟನೇ ತರಗತಿವರೆಗೂ ದಾಖಲಾತಿ ಕೋರಿ ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ ಎಂದರು.

ವಾಣಿಜ್ಯ ಸಂಕೀರ್ಣದಲ್ಲಿ ನಡೆಯುತ್ತಿರುವ ಶಾಲೆಯಲ್ಲಿ ಈಗಾಗಲೇ ದಾಖಲಾಗಿರುವ ಮಕ್ಕಳ ಭವಿಷ್ಯ ವನ್ನು ಹಾಳು ಮಾಡುವ ಹುನ್ನಾರದಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಒಳಪಟ್ಟಿದ್ದನ್ನು ಗಮನಿಸಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸಾರ್ವಜನಿಕ ಹಿತ ರಕ್ಷಣಾ ವೇದಿಕೆ ಮುಖೇನ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಸದಸ್ಯರಾದ ಶ್ರೀಧರ್ ದೋಣಿಖಣ, ಸಂತೋಷ್ ಗುರೂಜಿ, ಮಂಜು ಎಸ್.ಡಿ.ಎಂ, ನಂದಕುಮಾರ್, ಶ್ರೀನಿವಾಸ್, ಶರತ್ ಹಾಜರಿದ್ದರು.