ಹುಬ್ಬಳ್ಳಿ: ಅವಳಿನಗರದಲ್ಲಿ ತಲೆ ಎತ್ತಿದ್ದ ಅನಧಿಕೃತ ಲೇಔಟ್ಗಳ ವಿರುದ್ಧ ವರ್ಷದ ಹಿಂದೆ ಕಾರ್ಯಾಚರಣೆ ನಡೆಸಿದ್ದ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಇದೀಗ ಮತ್ತೆ ಮೈಕೊಡವಿ ಎದ್ದಿದೆ.
ಅಧ್ಯಕ್ಷರಿಲ್ಲದೇ ಮಂದವಾಗಿದ್ದ ಹುಡಾ ಆಡಳಿತ ವ್ಯವಸ್ಥೆಯಿಂದಾಗಿ ಮತ್ತೆ ಅಕ್ರಮ ಹಾಗೂ ಅನಧಿಕೃತ ಲೇಔಟ್ ಚಟುವಟಿಕೆಗಳು ಹೆಚ್ಚಿರುವ ಬಗ್ಗೆ ‘ವಿಜಯವಾಣಿ’ ಪತ್ರಿಕೆಯಲ್ಲಿ ಬುಧವಾರ ವರದಿ ಪ್ರಕಟವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ತಾಲೂಕಿನ ತಿಮ್ಮಸಾಗರ ಗ್ರಾಮ ವ್ಯಾಪ್ತಿಯ 5.28 ಎಕರೆ ಹಾಗೂ 1.6 ಎಕರೆ ಜಮೀನಿನಲ್ಲಿ ನಿರ್ವಿುಸಲಾಗಿದ್ದ 2 ಅನಧಿಕೃತ ಲೇಔಟ್ಗಳನ್ನು ಹುಡಾ ಸಿಬ್ಬಂದಿ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಗುರುತು ಕಲ್ಲುಗಳನ್ನು ಕಿತ್ತು ಹಾಕಿದರು. ಗಟಾರು, ರಸ್ತೆ ಇತರ ಸೌಲಭ್ಯಗಳನ್ನು ತೆರವು ಮಾಡಿದರು.
ಅವಳಿನಗರ ವ್ಯಾಪ್ತಿಯಲ್ಲಿ ನಿಮಾಣಗೊಂಡಿರುವ ಅನಧಿಕೃತ ಲೇಔಟ್ ತೆರವು ಕಾರ್ಯುಚರಣೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ಆರಂಭಿಸಲಾಗಿದೆ. ಹುಡಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಮಾರ್ಗದರ್ಶನದಲ್ಲಿ ಹುಡಾ ಆಯುಕ್ತ ಡಾ. ಸಂತೋಷಕುಮಾರ ಬಿರಾದಾರ ಅವರು ಅನಧಿಕೃತ ಬಡಾವಣೆಗಳ ಸಮೀಕ್ಷೆ ಕೈಗೊಂಡಿದ್ದಾರೆ. ಹಂತ, ಹಂತವಾಗಿ ಅವುಗಳ ತೆರವು ಕಾರ್ಯುಚರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಈಗಾಗಲೇ ಸಮೀಕ್ಷೆಯಲ್ಲಿ ಗುರುತಿಸಿರುವ ಅನಧಿಕೃತ ಲೇಔಟ್ಗಳ ತೆರವು ಕಾರ್ಯ ಮುಂದಿನ ದಿನಗಳಲ್ಲಿ ಮುಂದುವರಿಯಲಿದೆ. ಸಾರ್ವಜನಿಕರು ಅನುಮತಿ ಇಲ್ಲದೆ ನಿರ್ವಿುಸುವ ಅನಧಿಕೃತ ಲೇಔಟ್ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಂಬಂಧಪಟ್ಟ ಪ್ರಾಧಿಕಾರದಿಂದ ಅಗತ್ಯ ಅನುಮತಿ ಪಡೆಯದೇ ನಿರ್ವಿುಸುವ ಲೇಔಟ್ನಲ್ಲಿ ಸಾರ್ವಜನಿಕರು ಸೈಟ್, ಮನೆ ಖರೀದಿಸಬಾರದು’ ಎಂದು ಹುಡಾ ಆಯುಕ್ತರು ಮನವಿ ಮಾಡಿದ್ದಾರೆ.