ಚಿತ್ರದುರ್ಗ: ನಗರದ 14ನೇ ವಾರ್ಡ್ ವ್ಯಾಪ್ತಿಯಲ್ಲಿ ಅನಧಿಕೃತ ನಾಮಫಲಕ ಅಳವಡಿಸುತ್ತಿರುವುದನ್ನು ವಿರೋಧಿಸಿ ಹಿಂದು ಪರ ಸಂಘಟನೆಗಳ ಕಾರ‌್ಯಕರ್ತರು ಹಾಗೂ ಸ್ಥಳೀಯರು ನಗರಸಭೆಗೆ ಸೋಮವಾರ ಮನವಿ ಸಲ್ಲಿಸಿದರು. ಚಿತ್ರದುರ್ಗ ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧ ಸ್ಥ ಳವಾಗಿದ್ದು,ಚಿತ್ರದುರ್ಗದ ಪ್ರತಿ ಪ್ರದೇಶಕ್ಕೂ ತನ್ನದೇ ಆದ ಇತಿಹಾಸ ಮತ್ತು ಪಾರಂಪರಿಕ ಹಿನ್ನೆಲೆ ಇದೆ. ನೂರಾರು ವರ್ಷಗಳ ಹಿಂದಿನಿಂ ದಲೂ ತನ್ನದೆ ಆದ ಹೆಸರುಗಳಿಂದ ನಗರದ ಪ್ರದೇಶಗಳನ್ನು ಕರೆಲಾಗುತ್ತಿದೆ.
ಆದರೆ ಕೆಲವರು ಕಾನೂನು ಬಾಹಿರ ಮತ್ತು ಅನಧಿಕೃತವಾಗಿ ಹೊಸ ಹೆಸರಿನ ನಾಮಫಲಕಗಳನ್ನು ಹಾಕುತ್ತಿದ್ದಾರೆ. ಇದು ಕಾನೂನು ಮತ್ತು ಪರಂಪರೆಗೆ ಮಾಡಿದ ಅವಮಾನವಾಗಿರುತ್ತದೆ. ಇತ್ತಿಚೆಗೆ ಹೊಳಲ್ಕೆರೆ ರಸ್ತೆಯ 14ನೇ ವಾರ್ಡ್ ಗೌರಸಮುದ್ರ ಮಾರಮ್ಮನ ದೇ ವಾಲಯ ಸಮೀಪದ ಪ್ರದೇಶಗಳ ರಸ್ತೆಗಳಿಗೆ ನಾಮಫಲಕ ಅಳವಡಿಸುತ್ತಿರುವುದಕ್ಕೆ ತೀವ್ರ ವಿರೋಧವಿದೆ.
ತಕ್ಷಣವೇ ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕು ಹಾಗೂ ಅನಾಧಿಕಾಲದಿಂದ ಇರುವ ಹೆಸರಿನ ನಾಮಫಲಕಗಳನ್ನು ಕೂ ಡಲೇ ವಾರ್ಡ್‌ಗಳ ಪ್ರದೇಶ,ರಸ್ತೆ ಮತ್ತು ಅಡ್ಡರಸ್ತೆಗಳಿಗೆ ಅಳವಡಿಸಬೇಕೆಂದು ಆಗ್ರಹಿಸಿ ನಗರಸಭೆ ಆಯುಕ್ತೆ ಎಂ.ರೇಣುಕಾ ಅವರಿಗೆ ಮನವಿ ಸಲ್ಲಿಸಿದರು.
ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ‌್ಯಕರ್ತರಾದ ಪಿ.ರುದ್ರೇಶ್,ಶ್ರೀನಿವಾಸ್, ಮಂಜುನಾಥ್,ಛಲವಾದಿ ತಿಪ್ಪೇಸ್ವಾಮಿ, ವಾರ್ಡ್‌ನವರಾದ ಪುನೀತ್,ಆಡಿಟರ್ ಗಂಗಣ್ಣ,ರಾಜ,ರಾಜಣ್ಣ,ನವೀನ್,ಮಂಜು ಇತರರು ಇದ್ದರು.