ಸಖರಾಯಪಟ್ಟಣದಲ್ಲಿ ಕೆಪಿಎಂಇ ಅಡಿ ನೋಂದಣಿ ಮಾಡಿಕೊಳ್ಳದೆ ನಡೆಸುತ್ತಿದ್ದ ಶ್ರೀರಾಮ ಕ್ಲಿನಿಕ್ ಬಂದ್ ಮಾಡಿಸಿದ ಅಧಿಕಾರಿಗಳು. 
ಜಿಲ್ಲೆ

ಅನಧಿಕೃತ ಕ್ಲಿನಿಕ್‌ಗೆ ಬೀಗ

ಚಿಕ್ಕಮಗಳೂರು: ಸಖರಾಯಪಟ್ಟಣದಲ್ಲಿ ಕೆಪಿಎಂಇಯಲ್ಲಿ ನೊಂದಾಯಿಸದೆ ಅನಧಿಕೃತವಾಗಿ ನಡೆಸುತ್ತಿದ್ದ ಶ್ರೀರಾಮ ಕ್ಲಿನಿಕ್‌ಅನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ತಂಡ ಬೀಗ ಹಾಕಿ ಕ್ಲಿನಿಕ್ ಮುಚ್ಚಿಸಿದೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅಂದರಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವರದರಾಜು. ಆರ್ ಅವರು ಕೆಪಿಎಂಇಯಲ್ಲಿ ನೊಂದಾಯಿಸದೆ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿರುವುದು ಭೇಟಿನೀಡಿದ ತಂಡಕ್ಕೆ ಕಂಡುಬAದ ಹಿನ್ನೆಲೆಯಲ್ಲಿ ಕ್ಲಿನಿಕ್‌ನ್ನು ಬಂದ್ ಮಾಡಿಸಲಾಗಿದೆ.

ಈ ಸಂಬAಧ ಜಿಲ್ಲಾ ಅಧಿಕಾರಿ, ಅಧ್ಯಕ್ಷರು ಕೆಪಿಎಂಇ ನೋಂದಣಿ ಪ್ರಾಧಿಕಾರ ಇವರಿಗೆ ಸೂಕ್ತ ಕ್ರಮಕ್ಕಾಗಿ ದೂರು ಸಲ್ಲಿಸಲಾಗಿದೆ ಎಂದು ಕೆಪಿಎಂಇ ನೋಡಲ್ ಅಧಿಕಾರಿ ಡಾ. ಶಶಿಕಲಾ.ಎಂ ತಿಳಿಸಿದ್ದಾರೆ.

ವೈದ್ಯಾಧಿಕಾರಿಗಳ ತಂಡದಲ್ಲಿ ಜಿಲ್ಲಾ ಆರ್‌ಸಿಎಚ್‌ಓ, ಪ್ರಭಾರಿ ಡಿಎಚ್‌ಓ ಡಾ. ಮಂಜುನಾಥ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ. ಶಶಿಕಲಾ, ಜಿಲ್ಲಾ ಆಶ್ರಿತ ರೋಗಗಳ ರೋಗವಾಹಕ ನಿಯಂತ್ರಣಾಧಿಕಾರಿ ಡಾ. ಬಾಲಕೃಷ್ಣ ಮತ್ತಿತರರಿದ್ದರು.