ಚಿತ್ರದುರ್ಗ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ (ಕೆಪಿಎಂಇ) ಕಾಯ್ದೆ ಅನ್ವಯ ಖಾಸಗಿ ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್‌ಹೋಂ, ಲ್ಯಾಬ್‌ಗಳ ನೋಂದಣಿ ಮಾಡಿ, ಪರವಾನಗಿ ಕಡ್ಡಾಯವೆಂದು ಡಿಸಿ ಟಿ.ವೆಂಕಟೇಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನೋಂದಣಿ ಸಮಿತಿ ಸಭೆಯಲ್ಲಿ ಮಾತನಾಡಿ, ನೋಂದಣಿ ಇಲ್ಲದೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಆಯುಷ್ ಕ್ಲಿನಿಕ್‌ಗೆ ಪರವಾನಗಿ ಪಡೆದು, ಆಲೋಪತಿ ಚಿಕಿತ್ಸೆ ನೀಡುವವರ ವಿರುದ್ಧ ಕ್ರಮ ಖಚಿತ. ನೋಂದಣಿಯಿಲ್ಲದೆ ಕಾರ‌್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಡಿಎಚ್‌ಒಗೆ ಸೂಚಿಸಿದರು.
ಖಾಸಗಿ ಆಸ್ಪತ್ರೆ, ಕ್ಲಿನಿಕ್, ಲ್ಯಾಬ್, ರಕ್ತ ನಿಧಿ ಕೇಂದ್ರಗಳಲ್ಲಿ ಪರವಾನಗಿ ಪ್ರಮಾಣ ಪತ್ರ ಹಾಗೂ ಚಿಕಿತ್ಸಾ ದರಪಟ್ಟಿ ಪ್ರದರ್ಶಿಸಬೇಕು.
ಅಲೋಪತಿ ನೋಂದಣಿ ಪರವಾನಗಿ ಪ್ರದರ್ಶನ ಫಲಕ ಆಕಾಶ ನೀಲಿ ಹಾಗೂ ಆರ್ಯುವೇದ ನೋಂದಣಿ ಪರವಾನಗಿ ಫಲಕ ತಿಳಿಹಸಿರು ಬಣ್ಣದಲ್ಲಿರಬೇಕು ಎಂದರು.
ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರವೇಶ, ಪರಿಶೀಲನೆಗಾಗಿ ನೇಮಿಸಿದ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ, ಕಾಯ್ದೆ ಅನುಷ್ಠಾನದ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳ 200 ಮೀಟರ್ ಅಂತರದಲ್ಲಿ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳಿಗೆ ಅನುಮತಿ ನೀಡುವಂತಿಲ್ಲ. ಸರ್ಕಾರಿ ಆಸ್ಪತ್ರೆ ವ್ಯಾಪ್ತಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳ ಸ್ಥಳ ಪರಿಶೀಲಿಸಿ ನಿಯಮ ಉಲಂಘನೆಗಳಾಗಿದ್ದರೆ ಅಂತಹವುಗಳನ್ನು ಮುಚ್ಚಿಸುವಂತೆ ಡಿಚ್‌ಒಗೆ ನಿರ್ದೇಶಿಸಿದರು.
*ಪರಿಷ್ಕೃತ ದರ ನಿಗದಿ: ಡೆಂೆ ಜ್ವರ ಪತ್ತೆ ಹಚ್ಚುವ ಎಲಿಸಾ ಎನ್‌ಎಸ್ 1 ಹಾಗೂ ಐಜಿಎಂ ಪರೀಕ್ಷೆಗಳಿಗೆ 300 ರೂ. ಹಾಗೂ ರ‌್ಯಾಪಿಡ್ ಕಾರ್ಡ್ ಪರೀಕ್ಷೆಗೆ 250 ರೂ. ದರ ನಿಗದಿ ಮಾಡಿ ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ. ಖಾಸಗಿ ಆಸ್ಪತ್ರೆ,ಪ್ರಯೋಗಶಾಲೆ ಹಾಗೂ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗಳು ಈ ದರದಲ್ಲೇ ಟೆಸ್ಟ್ ನಡೆಸಬೇಕು. ಹೆಚ್ಚಿನ ದರ ವಸೂಲಿ ಮಾಡುವಂತಿಲ್ಲವೆಂದು ಡಿಸಿ ಹೇಳಿದರು.
ಖಾಸಗಿ ಆಸ್ಪತ್ರೆಗಳ 29 ನೋಂದಣಿ ಹಾಗೂ 13 ನವೀಕರಣ ಸೇರಿ 43 ಅರ್ಜಿಗಳ ಕುರಿತು ಚರ್ಚಿಸಲಾಯಿತು. 1 ಅರ್ಜಿಯನ್ನು ತಿರಸ್ಕರಿಸಿ, 42 ಅರ್ಜಿಗಳನ್ನು ಜಿಲ್ಲಾ ನೋಂದಣಿ ಸಮಿತಿ ಪುರಸ್ಕರಿಸಿತು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್, ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಐಎಂಎ ಸಂಘದ ಡಾ.ಪಿ.ಟಿ.ವಿಜಯ್‌ಕುಮಾರ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಎನ್‌ಜಿಒ ಪ್ರತಿನಿಧಿ ಕೆ.ಪಿ.ಮೀನಾಕ್ಷಿ, ಕೆಪಿಎಂಇ ವಿಷಯ ನಿರ್ವಾಹಕ ಎಚ್.ಬಿ.ಪೂಜಾರ್, ವಕೀಲ ಉಮೇಶ್ ಮತ್ತಿತರರು ಇದ್ದರು.
*ಕೋಟ್
ಡೆಂೆ ಜ್ವರ ಪ್ರಕರಣ ತಗ್ಗಿಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ‌್ಯನಿರ್ವಹಿಸಬೇಕು. ಹಾಟ್‌ಸ್ಪಾಟ್ ಎಂದು ಗುರುತಿಸಿರುವ ಸ್ಥಳಗಳಲ್ಲಿ ವಾರದ ಎಲ್ಲ ದಿನಗಳಲ್ಲೂ ಲಾರ್ವಾ ನಾಶ ಚಟುವಟಿಕೆ ನಡೆಸಬೇಕು.
ಟಿ.ವೆಂಕಟೇಶ್, ಡಿಸಿ