ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿ ಬ್ರಹ್ಮಕುಮಾರಿ ನೂತನ ಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅಂಬಿಕಾ ಅಕ್ಕ ಮಾತನಾಡಿದರು. ಪಾರ್ವತಿ ಅಕ್ಕ, ಸುಧಾ ಅಕ್ಕ, ಚಂಪಾ ಅಕ್ಕ ಇದ್ದರು. 
ಜಿಲ್ಲೆ

ಅಧ್ಯಾತ್ಮದಿಂದ ಬದುಕಿನಲ್ಲಿ ನೆಮ್ಮದಿ

ಬೈಲಹೊಂಗಲ: ನೆಮ್ಮದಿ, ಶಾಂತಿಯುತ ಬದುಕು ಹೊಂದಲು ಬ್ರಹ್ಮಕುಮಾರಿಯರ ಅಧ್ಯಾತ್ಮ ಸಂದೇಶ ಸಮಾಜಕ್ಕೆ ಅನುಕೂಲ ಎಂದು ಬೆಳವಡಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ ಹೇಳಿದರು.

ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಅಧ್ಯಾತ್ಮ ಚಿಂತನ ಮಂದಿರದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳಗಾವಿಯ ಬ್ರಹ್ಮಕುಮಾರಿ ಅಂಬಿಕಾ ಅಕ್ಕನವರು ಮಾತನಾಡಿ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ತ್ಯಜಿಸಿ ಬದುಕು ನಡೆಸಿದಾಗ ಮಾತ್ರ ಜೀವನ ಸಾಕ್ಷಾತ್ಕಾರ ಸಾಧ್ಯ ಎಂದರು.

ರಕ್ಷಾ ಬಂಧನ ಕಾರ್ಯಕ್ರಮ ನೆರವೇರಿತು. ಬ್ರಹ್ಮಕುಮಾರಿಯರಾದ ಸುಧಾ ಅಕ್ಕ, ಚಂಪಾ ಅಕ್ಕ ಇದ್ದರು. ಹಿರಿಯರಾದ ಎಂ.ಎಂ.ಕಾಡೇಶನವರ, ಜಿಪಂ ಮಾಜಿ ಸದಸ್ಯ ಈರಣ್ಣ ಕರೀಕಟ್ಟಿ, ಬಸವರಾಜ ಹಕ್ಕರಕಿ, ಯಾಸೀನ್ ಕಿತ್ತೂರ, ಬಸಯ್ಯ ಬೋಜಯ್ಯನವರ, ಮಲ್ಲಪ್ಪ ಯರಿಕಿತ್ತೂರ, ಶಶಿಧರ ಪತ್ತಾರ, ವಿಲಾಸ ಕೊಟಬಾಗಿ, ಬಾಳಪ್ಪ ಶೀಲವಂತರ, ವಿ.ಎಸ್.ಬಳಿಗಾರ ಇದ್ದರು. ಪಾರ್ವತಿ ಅಕ್ಕ ನಿರೂಪಿಸಿ ಸ್ವಾಗತಿಸಿದರು. ಯೋಗೀಶ ವಂದಿಸಿದರು.