ಬಾಗಲಕೋಟೆ: ಉದ್ಯೋಗಾವಕಾಶಗಳ ಜೊತಗೆ ಉದ್ಯಮಶೀಲರನ್ನು ಬೆಳೆಸುವುದರಲ್ಲಿ ನಿರ್ವಹಣಾ ಶಾಸ್ತç ಅಧ್ಯಯನ ಪಾತ್ರ ಬಹಳ ಮುಖ್ಯವಾಗಿದೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ಇನ್ಸಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಸ್ಟಡೀಸ್‌ನ ಪ್ರಾಧ್ಯಾಪಕ ಡಾ.ಉತ್ತಮ ಕಿಣಂಗೆ ಹೇಳಿದರು.
ನಗರದ ಬಿವಿವಿ ಸಂಘದ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ ಸ್ಟಡೀಸ್ ನಿಂದ ಶನಿವಾರ ಆಯೋಜಿಸಿದ ಬಿಮ್ಸ್ ಕಲಾಪರ್ವ-೨೦೨೫ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿರ್ವಹಣಾ ಶಾಸ್ತçವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅನೇಕ ಕೌಶಲಗಳು ಅವಶ್ಯವಾಗಿರುತ್ತವೆ. ಅವುಗಳಲ್ಲಿ ಉದ್ಯಮಶೀಲ ಕೌಶಲ, ತಾಂತ್ರಿಕ ಕೌಶಲ, ನಾಯಕತ್ವ ಕೌಶಲಗಳು, ಸಂವಹನ ಕೌಶಲ್ಯಗಳು ಬಹುಮುಖ್ಯವಾಗಿವೆ. ನಿರ್ವಹಣಾ ಶಾಸ್ತçವು ಕೇವಲ ಉದ್ಯೋಗಾವಕಾಶಗಳನ್ನು ಒದಗಿಸದೇ, ಅದರ ಜೊತೆಗೆ ಉದ್ಯಮಶೀಲರನ್ನು ಬೆಳೆಸುವುದರಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಮಹಾವಿದ್ಯಾಲಯದ ನಿರ್ದೇಶಕ ಡಾ.ಪ್ರಕಾಶ್ ಕೆ. ವಡವಡಗಿ, ಡಾ.ಎಸ್.ಎಂ ಗಾಂವಕರ, ಮೌಲ್ಯಮಾಪಕರಾಗಿ ಶ್ರದ್ಧಾ ಕಮತಗಿ, ಸತೀಶ್ ಹಿರೇಮಠ, ಪರಮೇಶ್ವರಿ ಮೆಲ್ನಾಡ, ನಮ್ರತಾ ಹಿರೇಮಠ, ಮೇಘಾ ಗುಮಾಸ್ಥೆ, ಪದ್ಮಾ ಅಣ್ಣೀಗೇರಿ ಇತರರು ಇದ್ದರು. ಅಭಿನವ ಮತ್ತು ನಿಖಿತಾ ಎಡಕೆ ನಿರೂಪಿಸಿದರು. ಡಾ.ಅಮರೇಶ ಬಿ. ಚರಂತಿಮಠ ಸ್ವಾಗತಿಸಿದರು. ಶೃತಿ ಮ್ಯಾಗೇರಿ ಪರಿಚಯಿಸಿದರು. ಪ್ರಿಯಾಂಕ ಮಾಗಿ ವಂದಿಸಿದರು.