ಜಿಲ್ಲೆ

ಅಧ್ಯಕ್ಷರಾಗಿ ಸುಮಿತಾ,ಉಪಾಧ್ಯಕ್ಷರಾಗಿ ಶ್ರೀದೇವಿ

ಚಿತ್ರದುರ್ಗ:ಚಿತ್ರದುರ್ಗ ನಗರಸಭೆ ನೂತನ ಅಧ್ಯಕ್ಷರಾಗಿ ಬಿ.ಎನ್.ಸುಮಿತಾ ರಾಘವೇಂದ್ರ ಹಾಗೂ ಜಿ.ಎಸ್.ಶ್ರೀದೇವಿ ಅವರು ಆಯ್ಕೆಯಾಗಿ ದ್ದಾರೆ. ಹೊಸ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ನಗರಸಭೆಯಲ್ಲಿ ಸೋಮವಾರ ಚುನಾವಣೆ ನಡೆಯಿತು. ಚುನಾವಣಾಧಿಕಾರಿ,ಎಸಿ ಎಂ.ಕಾರ್ತಿಕ್ ಫಲಿತಾಂಶ ಪ್ರಕಟಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಸುಮಿತಾ ಹಾಗೂ ಎಸ್.ಸಿ.ತಾರಕೇಶ್ವರಿ ಅವರು,ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಎಸ್.ಶ್ರೀದೇವಿ ಮತ್ತು ಬಿ.ಎಸ್.ರೋಹಿಣಿ ಅವರು ನಾ ಮಪತ್ರ ಸಲ್ಲಿಸಿದ್ದರು. 35 ಚುನಾಯಿತ ಸದಸ್ಯ ಬಲದ ನಗರಸಭೆ ಸದಸ್ಯರ ಸಂಖ್ಯೆ,ಒಬ್ಬರ ನಿಧನದಿಂದ 34ಕ್ಕೆ ಕುಸಿದಿತ್ತು. ಚಿತ್ರದುರ್ಗ ಶಾಸಕ ಕೆ. ಸಿ.ವೀರೇಂದ್ರಪಪ್ಪಿ ಸೇರಿದಂತೆ 35 ಸದಸ್ಯರು ಮತ ಚಲಾಯಿಸಿದರು.
ಸುಮಿತಾ ಹಾಗೂ ಶ್ರೀದೇವಿ ಅವರು ತಲಾ 22 ಮತಗಳನ್ನು ಪಡೆಯುವ ಮೂಲಕ ಕ್ರಮವಾಗಿ ನಗರಸಭೆ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಾಗಿ ಆ ಯ್ಕೆಯಾದರು. ಈ ಆಯ್ಕೆಗೆ ಸಹಕರಿಸಿದ ಸದಸ್ಯರಿಗೆ ಶಾಸಕರು ಕೃತಜ್ಞತೆ ಸಲ್ಲಿಸಿದರು. ನಗರದ ಸ್ವಚ್ಛತೆ,ಅಭಿವೃದ್ಧಿಗೆ ಒತ್ತು ನೀಡುವುದಾಗಿ ಸುಮಿತಾ ಹೇಳಿದರೆ,ಜನಪ್ರತಿನಿಧಿಗಳ ಸಹಕಾರದೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುವುದಾಗಿ ಹೇಳಿದರು. ನಗರಸಭೆ ಆಯುಕ್ತೆ ಎಂ.ರೇಣು ಕಾ,ತಹಸೀಲ್ದಾರ್ ಡಾ.ನಾಗವೇಣಿ ಇದ್ದರು.