ಕೆ.ಆರ್.ಸಾಗರ: ಕೆ.ಆರ್.ಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರುತಿ ಶ್ರೀನಿವಾಸ, ಉಪಾಧ್ಯಕ್ಷರಾಗಿ ರವಿಶಂಕರೇಗೌಡ ಅವಿರೋಧ ಆಯ್ಕೆಯಾದರು.
ಒಟ್ಟು 22 ಸದಸ್ಯರಿರುವ ಗ್ರಾಪಂಗೆ ಶುಕ್ರವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಬಿಸಿಎಂ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಶ್ರುತಿ, ಉಪಾಧ್ಯಕ್ಷ ಸ್ಥಾನಕ್ಕೆ ರವಿಶಂಕರೇಗೌಡ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಚುನಾವಣಾಧಿಕಾರಿಯೂ ಆದ ತಾಪಂ ಕಾರ್ಯನಿರ್ವಹಣಾಧಿಕಾರಿ ವೀಣಾ ರಾಜೇಗೌಡ ಅವಿರೋಧ ಆಯ್ಕೆ ಘೋಷಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜು, ಸದಸ್ಯ ನಾಗೇಂದ್ರಕುಮಾರ್, ನರಸಿಂಹ, ಸಿ.ಮಂಜುನಾಥ, ಮುಖಂಡರಾದ ವಿಜಯಕುಮಾರ್, ಪ್ರಕಾಶ್, ವಿಷಕಂಠ ಪಿ.ರಾಜು, ಆನಂದ, ನಿಂಗೇಗೌಡ, ಉಮಾ ಬಸವರಾಜು ಅಭಿನಂದಿಸಿದರು.