ಜಿಲ್ಲೆ

ಅಧ್ಯಕ್ಷರಾಗಿ ಮಾದೇಶ್ ಕಂಡಾಯ್ಯನಪಾಳ್ಯ ಆಯ್ಕೆ

ಕೊಳ್ಳೇಗಾಲ: ಯಳಂದೂರು, ಹನೂರು ಹಾಗೂ ಕೊಳ್ಳೇಗಾಲ ತಾಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಮಾದೇಶ್ ಕಂಡಾಯ್ಯನಪಾಳ್ಯ ಹಾಗೂ ಕಾರ್ಯದರ್ಶಿಯಾಗಿ ನಿವೃತ್ತ ಪಿಎಸ್‌ಐ ಸಿದ್ದಲಿಂಗೇಗೌಡ ಆಯ್ಕೆಯಾದರು.

ಪಟ್ಟಣದ ಜಿ.ವಿ.ಗೌಡ ಕಾಲೇಜಿನಲ್ಲಿ ಸೋಮವಾರ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಆರ್.ನರೇಂದ್ರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಬನ್ನಿ ಸಾರಿಗೆ ಶಂಕರ್, ಗುಂಬಳ್ಳಿ ಸೋಮೇಶ್ ಅವರನ್ನು ಸಂಘದ ಸದಸ್ಯರು ಒಮ್ಮತದಿಂದ ಆಯ್ಕೆ ಮಾಡಿದರು.

ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಒಕ್ಕಲಿಗರ ಸಂಘದ ಎಲ್ಲ ನಿರ್ದೇಶಕರು ಒಮ್ಮತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ. ಸಂಘವನ್ನು ಅಭಿವೃದ್ಧಿಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ಬಡ ಹಾಗೂ ಜನಾಂಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಲು ಕಾರ್ಯಕ್ರಮ ರೂಪಿಸಲು ಚಿಂತಿಸಬೇಕೆಂದರು.

ಈ ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ರಾಜುಗೌಡ, ನಿರ್ದೇಶಕ ಎನ್.ಪ್ರಸನ್ನ ತೆಳ್ಳನೂರು, ಡಿ.ಕೃಷ್ಣೇಗೌಡ ಸಿಂಗನಲ್ಲೂರು, ಸಿದ್ದೇಗೌಡ, ಜಿ.ಶ್ರೀನಿವಾಸ, ಕೆ.ಭಾಸ್ಕರ, ಮಾದೇಗೌಡ(ಶೇಖರ್), ಎಸ್.ಮಂಜೇಶ್, ಆನಂದ್ ಕುಮಾರ್, ಡಿ.ಸತೀಶ್, ಮಾದೇಶ್, ಕೆ.ನಾಗರಾಜು ಅರೇಪಾಳ್ಯ, ಸುಂದ್ರಪ್ಪ, ಎಂ.ಮನು, ಜೆ.ಬಸವರಾಜು, ಮಾಜಿ ಕಾರ್ಯದರ್ಶಿ ಬಸವೇಗೌಡ, ಮಾಜಿ ನಿರ್ದೇಶಕ ನಾಗೇಂದ್ರ, ಸುಂದರ, ಶ್ರೀನಿವಾಸ್, ಕಾಳೇಗೌಡ, ಎ.ಕುಮಾರ್, ಚಾಮರಾಜನಗರ ಒಕ್ಕಲಿಗರ ಅಧ್ಯಕ್ಷ ಪುಟ್ಟಸ್ವಾಮಿ ಗೌಡ, ಜಿಲ್ಲಾ ಸಂಘದ ನಿರ್ದೇಶಕ ರಾಜಣ್ಣ ಪಣ್ಯದಹುಂಡಿ ಇತರಿದ್ದರು.