ಬಾಗಲಕೋಟೆ ನಗರದ ಬಸವೇಶ್ವರ ಬ್ಯಾಂಕ್ ಕೇಂದ್ರ ಕಚೇರಿ ಎದುರು ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಉಪಾಧ್ಯಕ್ಷ ರವಿಕುಮಾರ ಪಟ್ಟಣದ ವಿಜಯದ ನಗೆ ಬೀರಿದರು. ನಿರ್ದೇಶಕರಾಗಿ ಮೋಹನ ಗುರಲಿಂಗಪ್ಪ ವಾಲಿ, ಚಂದ್ರಶೇಖರಗೌಡ ತಮ್ಮನಗೌಡ ಪಾಟೀಲ, ಹೂವಪ್ಪ ಸೀತಪ್ಪ ರಾಥೋಡ, ವೀರಪ್ಪ ವಿರುಪಾಕ್ಷಪ್ಪ ಶಿರಗಣ್ಣನ್ನವರ, ಶ್ರೀಶೈಲ ಚನ್ನಬಸಪ್ಪ ಆರಬ್ಬಿ, ಶ್ರೀನಿವಾಸ ತಿಮ್ಮಯ್ಯ ಬಳ್ಳಾರಿ, ಶಶಿಧರ ಶಿವಯೋಗಪ್ಪ ಜಿಗಳೂರ, ಸಿದ್ದಪ್ಪ ಚಿನ್ನಪ್ಪ ಆಡಿನ ಇತರರು ಇದ್ದರು. 
ಜಿಲ್ಲೆ

ಅಧ್ಯಕ್ಷರಾಗಿ ಪ್ರಕಾಶ ತಪಶೆಟ್ಟಿ ಮರು ಆಯ್ಕೆ

ಬಾಗಲಕೋಟೆ: ರಾಜ್ಯದ ಪ್ರತಿಷ್ಠಿತ ಬಸವೇಶ್ವರ ಸಹಕಾರಿ ಬ್ಯಾಂಕ ನಿ.. ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಪ್ರಕಾಶ ಈಶ್ವರಪ್ಪ ತಪಶೆಟ್ಟಿ ಐದು ವರ್ಷಗಳ ಅವಽಗೆ ನೂತನ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ರವಿಕುಮಾರ ಯೋಗಪ್ಪ ಪಟ್ಟಣದ ಅವಿರೋಧವಾಗಿ ಆಯ್ಕೆಯಾಗಿದರು.

ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಬೆಂಬಲಿಗರು, ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕಳೆದ ನಾಲ್ಕು ದಶಕಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಪ್ರಕಾಶ ತಪಶೆಟ್ಟಿ ಅವರ ನೇತೃತ್ವದ ತಂಡಕ್ಕೆ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂದಿತು.

ಇನ್ನು ಬ್ಯಾಂಕಿನ ಪದಾಽಕಾರಿಗಳ ಚುನಾವಣೆಯಲ್ಲಿ ನಿರ್ದೇಶಕರಾಗಿ ಮೋಹನ ಗುರಲಿಂಗಪ್ಪ ವಾಲಿ, ಚಂದ್ರಶೇಖರಗೌಡ ತಮ್ಮನಗೌಡ ಪಾಟೀಲ, ಹೂವಪ್ಪ ಸೀತಪ್ಪ ರಾಥೋಡ, ವೀರಪ್ಪ ವಿರುಪಾಕ್ಷಪ್ಪ ಶಿರಗಣ್ಣನ್ನವರ, ಶ್ರೀಶೈಲ ಚನ್ನಬಸಪ್ಪ ಆರಬ್ಬಿ, ಶ್ರೀನಿವಾಸ ತಿಮ್ಮಯ್ಯ ಬಳ್ಳಾರಿ, ಶಶಿಧರ ಶಿವಯೋಗಪ್ಪ ಜಿಗಳೂರ, ಸಿದ್ದಪ್ಪ ಚಿನ್ನಪ್ಪ ಆಡಿನ, ದುರ್ಗಪ್ಪ ತಿಮ್ಮನ್ನ ನಾಯಕ, ಶಂಕರ ಸಂಗಪ್ಪ ಅರಿಶಿನಗೋಡಿ, ಶಂಕರಲಿAಗ ಮೋನಪ್ಪ ತಪಶೆಟ್ಟಿ, ಸುನೀಲ ಬಾಳಾಸಾಹೇಬ ಕಲಬುರ್ಗಿ, ಶರಣಪ್ಪ ಸಂಗಪ್ಪ ಹೆರಕಲ, ಶೈಲಜಾ ಮಹಾಬಳೇಶ್ವರಯ್ಯ ಗುಡಗುಂಟಿ, ಗೀತಾ ಸುಭಾಸಚಂದ್ರ ನಾರಾ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಚುನಾವಣಾ ಅಽಕಾರಿ ದಾನಯ್ಯ ಹಿರೇಮಠ, ಬ್ಯಾಂಕಿನ ಕಾರ್ಯನಿರ್ವಹಣಾಽಕಾರಿ ವಿವೇಕಾನಂದ ಕೇಮಾಳಿ, ಬ್ಯಾಂಕಿನ ಅಽಕಾರಿಗಳಾದ ಬಿ.ಎಸ್.ನಾವಲಗಿ, ಎಸ್.ಬಿ.ಬದಾಮಿ, ಎಂ.ಎಸ್.ಗುಡಗುAಟಿ, ಪಿ.ಎನ್.ಹಳ್ಳಿಕೇರಿ, ವ್ಹಿ. ಎಂ. ಹಿರೇಮಠ, ರಂಗನಾಥ ಬಡಿಗೇರ, ಜ್ಯೋತಿ ನಾವಲಗಿ, ಎಸ್.ಎಚ್.ಕುರ್ತಕೋಟಿ, ಅರವಿಂದ ಯಲಿಗಾರ ಇತರರು ಇದ್ದರು.