ಜಿಲ್ಲೆ

ಅಧ್ಯಕ್ಷರಾಗಿ ಕೆ.ಸುಮಿತ್, ಉಪಾಧ್ಯಕ್ಷರಾಗಿ ಶಿವಣ್ಣ ನಾಯಕ ಆಯ್ಕೆ

ಲಲಾಟಾಕ್ಷ ಎಸ್

ರಾವಂದೂರು: ಕಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಕೆ.ಸುಮಿತ್, ಉಪಾಧ್ಯಕ್ಷರಾಗಿ ಶಿವಣ್ಣ ನಾಯಕ ಅವಿರೋಧ ಆಯ್ಕೆಯಾಗಿದ್ದಾರೆ.

ಸಹಕಾರ ಸಂಘದ ಆವರಣದಲ್ಲಿ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕೆ.ಸುಮಿತ್, ಉಪಾಧ್ಯಕ್ಷ ಸ್ಥಾನಕ್ಕೆ ಶಿವಣ್ಣ ನಾಯಕ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಫಿಲೋಮಿನಾ ಅವಿರೋಧ ಆಯ್ಕೆ ಘೋಷಿಸಿದರು. ಗಂಗಾಧರ್, ಕೆ.ಎಸ್.ಶ್ರೀಕಂಠಯ್ಯ, ಎಂ.ಬಿ.ರವಿಕುಮಾರ್, ಎಂ.ಎಸ್.ಮಂಜಪ್ಪ, ಲಕ್ಷ್ಮೀ, ಸುಶೀಲಮ್ಮ, ಕೀರ್ತಿ, ಜವರೇಗೌಡ, ಕೃಷ್ಣಯ್ಯ, ಶಿವಣ್ಣ, ಜಯಣ್ಣ ಭಾಗವಹಿಸಿದ್ದರು.

ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ, ಸಹಕಾರ ಸಂಘಗಳು ಯಾವುದೇ ಪಕ್ಷ ಭೇದ ಮರೆತು ರೈತರ ಹಿತವನ್ನು ಕಾಪಾಡಲು ಮುಂದಾಗಬೇಕು. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ತಾರತಮ್ಯ ಮಾಡದೆ ರೈತರಿಗೆ ನಿಗದಿತ ಸಮಯಕ್ಕೆ ತಲುಪಿಸಬೇಕು. ರೈತರು ತೆಗೆದುಕೊಂಡ ಸಾಲವನ್ನು ನಿಗದಿತ ಸಮಯಕ್ಕೆ ಪಾವತಿಸಿದಾಗ ಸಂಘ ಅಭಿವೃದ್ಧಿ ಹೊಂದುತ್ತದೆ. ರೈತರಿಗೋಸ್ಕರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು ಈ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಎಲ್ಲ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ರೈತರಿಗೆ ಅಭಿನಂದನೆ ತಿಳಿಸಿದರು.

ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಚಿನ್, ಎಪಿಎಂಸಿ ಮಾಜಿ ಅಧ್ಯಕ್ಷ ಜಯಚಂದ್ರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್, ಗ್ರಾಪಂ ಸದಸ್ಯ ಜಗದೀಶ್, ದೀಪು, ಹರೀಶ್, ಪುಟ್ಟರಾಜ್, ಮಲ್ಲೇಗೌಡ, ದೇವೇಂದ್ರ, ರವಿ ನಾಯಕ, ಈಚೂರು ಲೋಕೇಶ್, ಮಹಾದೇವ, ಕಾಂಗ್ರೆಸ್ ಮುಖಂಡರು ಹಾಜರಿದ್ದರು.