ಹಾಸನ: ನಗರಸಭೆಯಲ್ಲೂ ಮೈತ್ರಿ ಮುಂದುವರಿಯಬೇಕೆಂದು ಬಿಜೆಪಿ ಆಶಿಸಿದ್ದು ನಾವು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿಲ್ಲ, ಉಪಾಧ್ಯಕ್ಷ ಸ್ಥಾನ ನಮಗೆ ಬಿಟ್ಟುಕೊಡಲು ಕೇಳಿದ್ದೇವೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಮಂಜು ಅವರು ಹೇಳಿದರು.
ಕೇಂದ್ರದಲ್ಲಿ ಮೈತ್ರಿ ಮಾಡಿಕೊಂಡಿರುವುದ್ದರಿಂದ ರಾಜ್ಯ ಧ್ಯಕ್ಷರು ಮತ್ತು ವಿರುದ್ಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಸಭೆ ನಡೆಸಿ ಒಮ್ಮತದ ತೀರ್ಮಾನ ಮಾಡಲಾಗಿದೆ.ಅದರಂತೆ ಬಿಜೆಪಿ ಎಂಎಲ್ಸಿ ಅಶ್ವತ್ಥ ನಾರಾಯಣ ಸಹ ಮೈತ್ರಿ ಮುಂದುವರಿಸಲು ತಿಳಿಸಿದ್ದಾರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಧ್ಯಕ್ಷ ಸ್ಥಾನ ನಮಗೆ ಕೊಡಬೇಕೆಂದು ಹೇಳಿದ್ದೆವು.ನಂತರ10:10 ಅಧಿಕಾರ ಹಂಚಿಕೆಯ ತೀರ್ಮಾನ ಮಾಡಿದ್ದರು. ಆ ಸೂಚನೆಯಿಂದ ಉಪಾಧ್ಯಕ್ಷ ಸ್ಥಾನ ನಮಗೆ ಬಿಟ್ಟುಕೊಡಲು ಕೇಳಿದ್ದೇವೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ನಾವು ಸ್ಪರ್ಧೆ ಮಾಡಲಿಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ 14ನೇ ವಾರ್ಡ್ ನ ಶಿಲ್ಪಾ ಅವರಿಂದ ಉಮೇದುವಾರಿಕೆ ಸಲ್ಲಿಸಲಾಗಿದೆ ಎಂದರು.
ನಾವು ಉಪಾಧ್ಯಕ್ಷ ಹುದ್ದೆಗೆ ಮಾತ್ರ ಸ್ಪರ್ಧೆ ಮಾಡಿದ್ದೇವೆ. ಮೈತ್ರಿ ಮುಂದುವರಿಯಲಿ ಎಂಬ ಉದ್ದೇಶದಿಂದ ನಾವು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿಲ್ಲ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಮೋಹನ್, ಸದಸ್ಯರಾದ ಶ್ರೀನಿವಾಸ್, ಚಂದ್ರಶೇಖರ್, ಸಂತೋಷ್ ಇದ್ದರು