ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಭರ್ಜರಿಯಾಗಿ ಆರಂಭಗೊಂಡಿದೆ.
ಕಾಂಗ್ರೆಸ್ , ಬಿಜೆಪಿ ಪಕ್ಷಗಳು ಡಿಸಿಸಿ ಬ್ಯಾಂಕ್ ಅನ್ನು ತಮ್ಮ ವಶಕ್ಕೆ ಪಡೆಯಲು ರಣತಂತ್ರ ಹೆಣಿಯುತ್ತಿವೆ. ಈ ಸಂಬಂಧ ಹಿರಿಯ ನಾಯಕರು ತಮ್ಮ ಬೆಂಬಲಿತ ಹೊಸ ನಿರ್ದೇಶಕರೊಂದಿಗೆ ಸರಣಿ ಸಭೆ ನಡೆಸುತ್ತಿದ್ದಾರೆ. ಯಾರು ಚುಕ್ಕಾಣಿ ಹಿಡಿಯಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.
ಇನ್ನು ನಿರ್ದೇಶಕರಾಗಿ ಆಯ್ಕೆಯಾಗಿರುವ ನಾಯಕರಿಗೆ ಅಭಿನಂದನೆಗಳ ಮಹಾಪೂರವೆ ಹರಿದು ಬರುತ್ತಿದ್ದು, ಲಾಟರಿ ಮೂಲಕ ನಡೆದ ಆಯ್ಕೆಯಲ್ಲಿ ಅದೃಷ್ಟದ ಜಯ ಸಾಧಿಸಿದ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಕಂಬಳಿ ಹೊದಿಸಿ ಭಾನುವಾರ ಸನ್ಮಾನಿಸಿದ್ದು ವಿಶೇಷವಾಗಿತ್ತು.