ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೧೪ ನೇ ಘಟಿಕೋತ್ಸವದಲ್ಲಿ ೧೬ ಚಿನ್ನದ ಪದಕ ಪಡೆದ ಭೀಮವ್ವ ಕರ್ಕಿಹಳ್ಳಿ ಹಾಗೂ ತಾಯಿ ಯಲ್ಲವ್ವ, ಸಹೋದರ ಪ್ರಕಾಶ ಸಂತಸದ ಕ್ಷಣಗಳು.  
ಜಿಲ್ಲೆ

ಅಧಿಕಾರಿಯಾಗಿ ಅನ್ನದಾತರ ಸೇವೆ ಸಲ್ಲಿಸುವ ಆಸೆ...!!

ಸಂತೋಷ ದೇಶಪಾಂಡೆ ಬಾಗಲಕೋಟೆ:

ಚಿಕ್ಕ ವಯಸ್ಸಿನಲ್ಲಿ ನೋವು, ಸಂಕಟ, ಕಷ್ಟ ಕಣ್ಣಾರೆ ಕಂಡಿದ್ದೇನೆ. ಸರ್ಕಾರಿ ಶಿಕ್ಷಣವೇ ನನಗೆ ಆಧಾರ. ಹೀಗಾಗಿ ಕೆಎಎಸ್ ಅಽಕಾರಿಯಾಗಿ ಅನ್ನದಾತರಿಗೆ ಸೇವೆ ಸಲ್ಲಿಸಬೇಕು ಎನ್ನುವ ಮಹದಾಸೆ ನನಗೆ...!!

ಇಲ್ಲಿನ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೧೪ ನೇ ಘಟಿಕೋತ್ಸವದಲ್ಲಿ ೧೬ ಚಿನ್ನದ ಪಡೆದಕ ಭೀಮವ್ವ ಕರ್ಕಿಹಳ್ಳಿ ಚಿನ್ನದ ಬೆಡಗಿಯ ದೃಢ ಮಾತುಗಳಿವು. ಚಿಕ್ಕ ವಯಸ್ಸಿನಲ್ಲಿ ತಂದೆಯ ಅಕಾಲಿಕ ಮರಣ. ತಾಯಿ ಅಕ್ಷರಸ್ಥರಾಗಿದ್ದ ಕೃಷಿ ಕೆಲಸ ಮಾಡುತ್ತಲೆ ಬೆನ್ನಲುಬಾಗಿ ನಿಂತರು. ಘಾರೆ ಕೆಲಸ ಮಾಡುವ ಸಹಯೋದರ ಹೆಜ್ಜೆ ಹೆಜ್ಜೆಗೂ ಕೈ ಹಿಡಿದು ನಡೆಸುತ್ತಿದ್ದಾನೆ ಎನ್ನುತ್ತಲೆ ಕುಟುಂಬಸ್ಥರ ಕಣ್ಣಾಲೆಗಳು ತೇವಗೊಂಡವು.

ಭೀಮ್ಮವ್ವ ಕರ್ಕಿಹಳ್ಳಿ ಸರ್ಕಾರಿ ಶಾಲೆಯಲ್ಲಿಯೇ ಎಸ್ಸೆಸ್ಸೆಲ್ಸಿ ವರೆಗೂ ಓದಿದ್ದಾಳೆ. ಅದರಲ್ಲೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೯೫.೨೦ ಅಂಕ ಪಡೆದಿದ್ದು, ನವ ಚೇತನ ವಸತಿ ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಶೇ.೮೧.೮೮ ಅಂಕ ಪಡೆದು ಕೀರ್ತಿ ತಂದಿದ್ದಾರೆ. ಬೀದರನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಸ್ನಾತಕ ಪದವಿ ಓದಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾಳೆ. ಬೆಂಗಳೂರಿನಲ್ಲಿ ಪ್ಲೋರಿಂಗ ಕಲ್ಷರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.

ಮೂಲತಃ ಕೊಪ್ಪಳ ಜಿಲ್ಲೆಯ ತಳಕಲ್‌ದ ನಿವಾಸಿಯಾಗಿದ್ದು, ತಂದೆ ಸಣ್ಣ ನಿಂಗಪ್ಪ, ತಾಯಿ ಯಲ್ಲವ್ವ. ಕೃಷಿ ಕುಟುಂಬದವರಾಗಿದ್ದು, ತಂದೆ ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡರು. ತಾಯಿ ಆರೈಕೆ, ಸಹೋದರನ ನೆರಳಿನಲ್ಲಿ ಬೆಳೆದ ಭೀಮವ್ವ ಬಹಳಷ್ಟು ಬುದ್ದಿವಂತೆ. ಕುಟುಂಬದಲ್ಲಿ ಶಿಕ್ಷಣ ಕಲಿತರವರಿಲ್ಲ. ದುಡಿಮೆ ಬಿಟ್ಟರೇ ಬೇರೆನೂ ಗೊತ್ತಿಲ್ಲ. ಆದರೇ ಓದಿನಲ್ಲಿ ಆಸಕ್ತಿ ಹೊಂದಿರುವ ಭೀಮವ್ವಳ ಕನಸಿಗೆ ಎಂದಿಗೂ ಕುಟುಂಬಸ್ಥರು ಅಡ್ಡಿ ಬಂದಿಲ್ಲ. ಸಾಲ, ಸೂಲ ಮಾಡಿ ಶಿಕ್ಷಣ ನೀಡುತ್ತಿದ್ದಾರೆ.