filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0009,0.0000; brp_del_sen:0.1000,0.0000; motionR: null; delta:null; bokeh:0; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 233.0;aec_lux_index: 0;albedo: ;confidence: ;motionLevel: 65536;weatherinfo: weather?null, icon:null, weatherInfo:100;temperature: 34; 
ಜಿಲ್ಲೆ

ಅಧಿಕಾರಿಗಳ ವಿರುದ್ಧ ಜನಾಕ್ರೋಶ

ಅರಟಾಳ: 2022-23ನೇ ಸಾಲಿನಲ್ಲಿ ಅರಟಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ 2.23 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಈವರೆಗೆ ಯಾವ ಕ್ರಮವೂ ಆಗಿಲ್ಲ. ಹೀಗಾಗಿ, ಗ್ರಾಮಸಭೆ ಹೆಸರಿಗಷ್ಟೇ ಎಂಬಂತಾಗಿದೆ ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮದ ವಿಠ್ಠಲ-ರುಕ್ಮೀಣಿ ದೇವಸ್ಥಾನದ ಸಭಾಭವನದಲ್ಲಿ ಗ್ರಾಮ ಪಂಚಾಯಿತಿಯ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಗ್ರಾಮಸಭೆ ನಡೆದು ಜನರಿಗೆ ಅನುಕೂಲವಾಗಲಿ ಎಂದು ಹೇಳಿದರು.

ಸಾಮಾಜಿಕ ಲೆಕ್ಕ ಪರಿಶೋಧನೆ ತಾಲೂಕು ಸಂಯೋಜಕ ಡಿ.ಎ್.ಮುಗಡ್ಲಿ ಮಾತನಾಡಿ, ಎಲ್ಲ ಇಲಾಖೆಗಳಿಂದ ನಡೆದಿರುವ ಕಾಮಗಾರಿ ಪರಿಶೀಲಿಸಿದ್ದೇವೆ. ಆದರೆ, ಅರಣ್ಯ ಇಲಾಖೆ ಮಾತ್ರ ಈವರೆಗೆ ಕಾಮಗಾರಿಗೆ ಸಂಬಂಧಿಸಿದ ಫೈಲ್ ನೀಡಿಲ್ಲ. 2022-23ನೇ ಸಾಲಿನ ಗ್ರಾಮಸಭೆಯಲ್ಲಿ ಅರಣ್ಯ ಇಲಾಖೆ ಕಾಮಗಾರಿ ಪೈಲ್ ನೀಡದಿರುವ ಬಗ್ಗೆ ಸಂಬಂಧಿಸಿದ ಇಲಾಖೆಗೆ ವರದಿ ಕಳಿಸಿದ್ದೇವೆ. ಈ ವರ್ಷವೂ ಅರಣ್ಯ ಇಲಾಖೆ ಕಾಮಗಾರಿ ಪೈಲ್ ಬಂದಿಲ್ಲವೆಂದು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ನೋಡಲ್ ಅಧಿಕಾರಿ ಡಾ.ವಿ.ಎ.ಸಿಂಧೂರ, ಗ್ರಾಪಂ ಉಪಾಧ್ಯಕ್ಷ ಶಂಕರ ಕೆಂಚಗೊಂಡ, ಪಿಡಿಒ ಎ.ಜಿ.ಎಡಕೆ, ಕಾರ್ಯದರ್ಶಿ ಆನಂದ ಗಿರಿಜಾಗೋಳ, ಗ್ರಾಪಂ ಸದಸ್ಯ ಶಿವಾನಂದ ನೇಮಗೌಡ, ಸದಾಶಿವ ಹೊನಗೌಡ, ಅಣ್ಣಪ್ಪ ಕಾಂಬಳೆ, ಡಾ.ಬಸವರಾಜ ಕೆಂಚಗೊಂಡ, ಶಿವಲಿಂಗಪ್ಪ ಹೊನಗೌಡ, ವಿಠ್ಠಲ ಹಟ್ಟಿ, ಮಲ್ಲಿಕಾರ್ಜುನ ತೆಲಸಂಗ, ಕಾಂತಾಬಾಯಿ ಹಟ್ಟಿ, ಬಂಗಾರೆವ್ವ ಐಗಳಿ, ಗಂಗವ್ವ ಅರ್ಜುಣಗಿ, ಮುತ್ತವ್ವ ಪೂಜಾರಿ, ಶಾಂತಾ ಕಟ್ಟಿಮನಿ, ಮಾಲಾ ಕಾಂಬಳೆ ಹಾಗೂ ಗ್ರಾಮಸ್ಥರು ಇದ್ದರು.