ಚಿತ್ರದುರ್ಗ: ಜಾತಿ ಪ್ರಮಾಣ ಪತ್ರ ನೀಡದೆ ಕಾಡುಗೊಲ್ಲ ಸಮುದಾಯದವರನ್ನು ಸರ್ಕಾರಿ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತಿರುವ ಅಧಿ ಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ರಾಜ್ಯಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಶಿವುಯಾದವ್ ಅವರು ಮಂಗಳವಾರ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಜಾತಿ ಪ್ರಮಾಣ ಪತ್ರ ವಿತರಣೆಗೆ ಸಂಬಂಧಿಸಿದಂತೆ ಸರ್ಕಾರ ಕಾಲ,ಕಾಲಕ್ಕೆ ಸ್ಪಷ್ಟ ಆದೇಶಗಳನ್ನು ನೀಡಿದ್ದರೂ ಕೆಲವು ತಹಸೀಲ್ದಾರ್‌ಗಳ ಸಹಿತ ಸಂಬಂಧಿಸಿದ ಹಲವು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದರೆ,ಇನ್ನು ಕೆಲವರು ಕೋರಿಕೆಯನ್ನು ತಿರಸ್ಕರಿಸುತ್ತಿದ್ದಾರೆ. ಜಾತಿ ಪ್ರಮಾಣ ಪತ್ರ ಕೊಡಿಸುವಂತೆ ಈವರೆಗೆ ಅನೇಕ ಹೋರಾಟಗಳನ್ನು ನಡೆಸಲಾಗಿದೆ. ಇದಕ್ಕೆ ಸ್ಪಂದಿಸಿರುವ ಸರ್ಕಾರ ಕಳೆದ ಮಾರ್ಚ್ 20 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ‌್ಯದರ್ಶಿ ಅವರು ಹೊರಡಿಸಿರುವ ಸುತ್ತೋಲೆ ಹೊರಡಿಸಿ ಕಾಡುಗೊಲ್ಲ,ಹಟ್ಟಿಗೊಲ್ಲ ಜಾತಿಗಳಿಗೆ ಜಾತಿ,ಆದಾಯ ಪ್ರಮಾಣ ಹಾಗೂ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡುವ ಕುರಿತಂತೆ ಎಲ್ಲ ಜಿಲ್ಲಾಧಿಕಾರಿಗಳು,ತಹಸ್ದೀಲಾರ್ ಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಬೆಂಗಳೂರಿನ ಆಟಲ್‌ಜೀ ಜನಸ್ನೇಹಿ ನಿರ್ದೇಶನಾಲಯದಿಂದಲೂ ಸೂಚನೆ ಇದೆ. ಆದರೆ ಕೆಲವು ಅಧಿಕಾರಿಗಳು ಆದೇಶಗಳನ್ನು ಪಾ ಲಿಸದೆ ಕಾಡುಗೊಲ್ಲ ಸಮುದಾಯದವರನ್ನು ಸರ್ಕಾರಿ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತಿದ್ದು,ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾ ಖಲಿಸಬೇಕು ಹಾಗೂ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಶಿವುಯಾದವ್ ಮನವಿ ಮಾಡಿದ್ದಾರೆ.