ಜಿಲ್ಲೆ

ಅಧಿಕಾರಿಗಳ ಭರವಸೆ ಸತ್ಯಾಗ್ರಹ ಅಂತ್ಯ

ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ವಿವಿಧ ಬೇಡಿಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಎರಡು ದಿನಗಳಿಂದ ನಡೆಸುತ್ತಿದ್ದ ಸತ್ಯಾಗ್ರಹಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀಡಿದ ಭರವಸೆ ಮೇರೆಗೆ ಶುಕ್ರವಾರ ಹಿಂಪಡೆಯಲಾಯಿತು ಎಂದು ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ್ ತಿಳಿಸಿದ್ದಾರೆ.

ವಡಗೇರಾ ತಾಲೂಕಿನಲ್ಲಿ ಸರ್ಕಾರಿ ಕಚೇರಿಗಳು ಆರಂಭಿಸಬೇಕು. ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ಶಿವಪುರ ಮತ್ತು ಗೋನಾಲ್ ರೈತರ ಬಹುದಿನಗಳ ಬೇಡಿಕೆ ಈಡೆರೀಸಬೇಕೆಂದು ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಸ್ಥಳಕ್ಕೆ ಹಂಪಣ್ಣ ಸಜ್ಜನ್ ಭೇಟಿ ನೀಡಿ, ತಮ್ಮ ಬೇಡಿಕೆಗಳ ಮನವಿ ಸರ್ಕಾರಕ್ಕೆ ಕಳುಹಿಸಿ, ಈ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು, ಕಾರಣ ನಿರಶನ ಅಂತ್ಯಗೊಳಿಸಿ ಎಂಬ ಅವರ ಭರವಸೆ ಮೇರೆಗೆ ಹಿಂಪಡೆಯಲಾಗಿದೆ ಎಂದು ಅವರು ತಿಳಿಸಿದರು.

ತಾಲೂಕು ಅಧ್ಯಕ್ಷ ಅಬ್ದುಲ್ ಚಿಗಾನೂರ ಮಾತನಾಡಿ, ಒಂದು ತಿಂಗಳಲ್ಲಿ ಬೇಡಿಕೆ ಈಡೆರದಿದ್ದರೆ, ವಡಗೇರಾ ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

ಈ ವೇಳೆ ಬಿಜೆಪಿ ಹಾಗೂ ಕರವೇ ಪದಾಧಿಕಾರಿಗಳು ಮತ್ತು ಪ್ರಮುಖರಾದ ಸಿದ್ದಣ್ಣ ಗೌಡ ಕಾಡಂನೂರ, ಬಾಶುಮಿಯ್ಯ, ರಾಚಣ್ಣಗೌಡ ಮುದ್ನಾಳ್, ಚೌಡಯ್ಯ ಮುದ್ನಾಳ್, ಪರಶುರಾಮ ಕುರುಕುಂದಿ, ನಿಂಗಪ್ಪ ಹತ್ತಿಮನಿ, ಬಸವರಾಜ ಸೊನ್ನದ್, ವಿಲಾಸ ಪಾಟೀಲ್, ಮಹೇಶ ಮುದ್ನಾಳ್, ಸಿದ್ದು ನಾಯಕ, ಮಲ್ಲು ಮಾಳಿಕೇರಿ, ವಿಶ್ವಾರಾಧ್ಯ ದಿಮ್ಮೆ, ಅಂಬರೀಶ, ವಿಶ್ವರಾಜ್, ಬಸ್ಸು ನಾಯಕ್ ಸೇರಿದಂತೆ ಅನೇಕರು ಇದ್ದರು.

ಛಲುವಾದಿ ಭೇಟಿ: ತಾಲೂಕು ರಚನೆಯಾಗಿ ಸುಮಾರು ವರ್ಷ ಕಳೆದರೂ ಸರ್ಕಾರ ಇಲ್ಲಿ ಕನಿಷ್ಟ ತಾಲೂಕು ಮಟ್ಟದ ಕಚೇರಿ ತೆರದು ಅಧಿಕಾರಿಗಳನ್ನು ನಿಯೋಜನೆ ಮಾಡುವತ್ತ ಗಮನ ಹರಿಸಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲುವಾದಿ ನಾರಾಯಣ ಸ್ವಾಮಿ ಆರೋಪಿಸಿದರು. ಕರವೇ ತಾಲೂಕು ಮತ್ತು ಜಿಲ್ಲಾ ಘಟಕದ ಪ್ರಮುಖರು ಹಮ್ಮಿಕೊಂಡ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆ ಪರಿಶೀಲಿಸಿದರು. ಈ ಎಲ್ಲ ಬೇಡಿಕೆಗಳ ಬಗ್ಗೆ ಸರ್ಕಾರ ಗಮನಕ್ಕೆ ತಂದು ಈಡೆರೀಸುವ ಭರವಸೆ ನೀಡಿದರು. ಜಿಲ್ಲಾಡಳಿತ ಮತ್ತು ಜಿಲ್ಲೆಯ ಸಚಿವ, ಶಾಸಕರು ವಡಗೇರಾ ತಾಲೂಕಿನ ಬಗ್ಗೆ ತಾಳಿರುವ ನಿರ್ಲಕ್ಷö್ಯ ಖಂಡಿಸಿದರು.