ಬಾಗಲಕೋಟೆ: ನಗರದ ಮೂಲ ಸೌಕರ್ಯ, ಸ್ವಚ್ಛತೆ, ವಸತಿ ನಿಲಯಗಳು ಸೇರಿದಂತೆ ನಗರದ ವಿವಿಧೆಡೆ ಲೋಕಾಯುಕ್ತ ಅಽಕಾರಿಗಳು ಸಂಚರಿಸಿ ನಗರಸಭೆ, ಬಿಟಿಡಿಎ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ. ಲೋಕಾಯುಕ್ತರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಾಗದೇ ಅಧಿಕಾರಿಗಳು ಬೇವತು ಹೋದರು.
ಲೋಕಾಯುಕ್ತ ಎಸ್ಪಿ ಅನಿತಾ ಹದಣ್ಣವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಹಳೇ ಬಾಗಲಕೋಟೆ, ನವನಗರ, ವಿದ್ಯಾಗಿರಿ ಸೇರಿದಂತೆ ವಿವಿಧೆಡೆ ಪ್ರದಕ್ಷಿಣೆ ಹಾಕಿ ಸಂಚಲನ ಮೂಡಿಸಿದರು. ಶುಚಿತ್ವ ಇಲ್ಲದಿರುವುದು ಕಂಡು ಬೇಸರ ವ್ಯಕ್ತಪಡಿಸಿದರು.
ಬಿಟಿಡಿಎಯಲ್ಲಿ ೧೯೯೬ರ ಕರೀಂ ಲಾಲಾ ತೆಲಗಿಯ ನಕಲಿ ಛಾಪಾಕಾಗದಗಳು ಹರಿದಾಡೋದು ನಮಗೆ ಗೊತ್ತು. ಲೋಕಾಯುಕ್ತರು ಪತ್ರ ಬರೆದರು ನೀವೂ ಉತ್ತರಿಸುವುದಿಲ್ಲ. ಹೀಗೆ ಮುಂದುವರೆದಲ್ಲಿ ದಿಟ್ಟ ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು. ವಿದ್ಯಾಗಿರಿ ಸಿಬಿಎಸ್‌ಸಿ ಶಾಲಾ ರಸ್ತೆಯಲ್ಲಿನ ಖಾಲಿ ನಿವೇಶನಗಳನ್ನು ಪರಿಶೀಲಿಸಿ ನಿವೇಶನ ಮಾಲೀಕರಿಗೆ ನೋಟಿಸ್ ನೀಡುವಂತೆ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.
ನವನಗರದ ಬೃಂದಾವನ ಸೆಕ್ಟರ್, ವಾಂಬೆ ಕಾಲೋನಿ ಭೇಟಿ ನೀಡಿದರು. ವಾಂಬೆ ಕಾಲೋನಿಯಲ್ಲಿ ಪಾಳುಬಿದ್ದಿರುವ ಶೌಚಗೃಹ ಕಂಡು ಆಕ್ರೋಶ ವ್ಯಕ್ತಪಡಿಸಿದ ಎಸ್‌ಪಿ ಅನಿತಾ, ನೋಟಿಸ್ ನೀಡಿ ಬಂದರೆ ಈ ಹಣೆಬರಹ ಎಂದು ಆಯುಕ್ತ ಆರ್.ವಾಸಣ್ಣ ಅವರಿಗೆ ಚಾಟಿ ಬೀಸಿದರು.
ಬಳಿಕ ದೇವರಾಜ ಅರಸು ಮೆಟ್ರಿಕ್ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ವಸತಿ ನಿಲಯ ಸಮೀಪದ ಚರಂಡಿಗಳ ಪರಿಶೀಲನೆಗೆ ಮುಂದಾದಾಗ ಕಸದ ರಾಶಿ ಅವರ ಕಣ್ಣಿಗೆ ಬಿದ್ದಿತು. ಇಂತಹ ಗಲೀಜಿನಿಂದ ಸೊಳ್ಳೆಗಳು ಕಚ್ಚುತ್ತವೆ. ಕನಿಷ್ಠ ಪರಿಜ್ಞಾನ ಬೇಡವೇ ಅಭಿಯಂತರಗಳಾದ ಕಲ್ಲೂರಮಠ ಹಾಗೂ ಹೆಬ್ಬಳ್ಳಿ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಪಿಐ ಎಂ.ಎಚ್.ಬಿದರಿ ಅಽಕಾರಿಗಳನ್ನು ಪ್ರಶ್ನಿಸಿ ಎಷ್ಟು ಬಾರಿ ನಿಮಗೆ ನೋಟಿಸ್ ನೀಡಲಾಗಿದೆ. ಒಂದಾದರು ಸಾರಿಯಾದರು ಉತ್ತರ ನೀಡಿದ್ದೀರಾ? ಲೋಕಾಯುಕ್ತರನ್ನು ಕೇವಲವಾಗಿ ಕಂಡರೆ ಕಾನೂನಿನ ಮೂಲಕವೇ ಲೋಕಾಯುಕ್ತದ ಶಕ್ತಿಯನ್ನು ಪರಿಚಯಿಸಬೇಕಾಗುತ್ತದೆ. ಸ್ವಚ್ಛತಾ ಸಿಬ್ಬಂದಿಗಾಗಿ ಖರೀದಿಸಿರುವ ಕೈಗವಸು, ಸುರಕ್ಷಾ ಪರಿಕರಗಳ ದಾಖಲೆಗಳನ್ನು ಕೂಡಲೇ ಒದಗಿಸಿ ಎಂದು ವಾರ್ನಿಂಗ್ ನೀಡಿದರು.
ಶೌಚಗೃಹ ಪಾಳು ಬಿದ್ದು ಕಸ ಹಾಕುತ್ತಿದ್ದರೂ ನೀವು ಗಮನಿಸುತ್ತಿಲ್ಲ. ಹೀಗಾದರೆ ಜನರ ಗತಿಯೇನು ಇಲ್ಲಿ ಸ್ವಚ್ಛತೆ ವಾಹನ ಬರುವದಿಲ್ಲವೇ ಕಸ ಎಸೆಯೋರಿಗೆ ದಂಡ ಹಾಕಿ ಎಂದರು. ಆಯುಕ್ತರು ಬಡವರು ಇದ್ದಾರೆ ಅಂತ ಸಮಜಾಯಿಸಿ ನೀಡಲು ಮುಂದಾದರು. ಆಗ ಎಸ್ಪಿ ಅನಿತಾ ಅವರು ಕಾರಣ ಹೇಳಬೇಡಿ. ದೊಡ್ಡ ಮೊತ್ತದ ದಂಡವಲ್ಲ ಸಣ್ಣ ಪ್ರಮಾಣದಲ್ಲಿ ವಿಽಸಿ ಜಾಗೃತಿ ಮೂಡಿಸಿ ಎಂದು ಕಿವಿ ಮಾತು ಹೇಳಿದರು.