ಜಿಲ್ಲೆ

ಅಧಿಕಾರಿಗಳ ಗೈರು, ಪೂರ್ವಭಾವಿ ಸಭೆ ಮುಂದೂಡಿಕೆ

ಚಾಮರಾಜನಗರ: ನಗರದ ಇತಿಹಾಸ ಪ್ರಸಿದ್ಧ ಶ್ರೀಚಾಮರಾಜೇಶ್ವರಸ್ವಾಮಿ ರಥೋತ್ಸವ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆ ಅಧಿಕಾರಿಗಳು ಗೈರು ಹಾಜರಿಯಿಂದ ಜೂ.12 ಕ್ಕೆ ಮುಂದೂಡಲಾಗಿದೆ.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಬೆಳಗ್ಗೆ ಜೂ. 14 ರಂದು ನಡೆಯುವ ಶ್ರೀಚಾಮರಾಜೇಶ್ವರಸ್ವಾಮಿ ಗಿರಿಜಾ ಕಲ್ಯಾಣ ಮಹೋತ್ಸವ ಹಾಗೂ ಜು. 10 ರಂದು ಆಷಾಢಮಾಸದಲ್ಲಿ ನಡೆಯುವ ಶ್ರೀಚಾಮರಾಜೇಶ್ವರಸ್ವಾಮಿ ರಥೋತ್ಸವ ಸಂಬಂಧ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ನಾಡದೇಶಶೆಟ್ಟರಾದ ವೈ.ವಿ.ಲೋಕನಾಥ್ ಮಾತನಾಡಿ, ಜೂ. 14 ರಂದು ನಡೆಯುವ ಚಾಮರಾಜೇಶ್ವರಸ್ವಾಮಿ ಗಿರಿಜಾ ಕಲ್ಯಾಣ ಮಹೋತ್ಸವ ಹಾಗೂ ಜು. 10 ರಂದು ಆಷಾಡಮಾಸದಲ್ಲಿ ನಡೆಯುವ ಚಾಮರಾಜೇಶ್ವರಸ್ವಾಮಿ ರಥೋತ್ಸವ ಸಂಬಂಧ ಕರೆದಿದ್ದ ಎಲ್ಲ ಕೋಮಾರಿನ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರಾದ ಹಿನ್ನಲೆಯಲ್ಲಿ ಸಭೆಯ ತೀರ್ಮಾನದಂತೆ ಮುಂದೂಡಲಾಗಿದ್ದು, ಜೂ. 12ಕ್ಕೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಅಂದು ನಡೆಯುವ ಸಭೆಗೆ ಎಲ್ಲ ಕೋಮಾರಿನ ಯಜಮಾನರು, ಸಂಘ-ಸಂಸ್ಥೆಗಳ ಮುಖಂಡರು, ಅಧ್ಯಕ್ಷರು, ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ನಗರಸಭಾ ಅಧ್ಯಕ್ಷ ಸುರೇಶ್,ಕೋಮಾರಿನ ಯಜಮಾನರಾದ ಚಾ.ರಂ.ಶ್ರೀನಿವಾಸಗೌಡ, ವೆಂಕಟರಮಣಸ್ವಾಮಿ (ಪಾಪು), ನಗರಸಭಾ ಮಾಜಿ ಸದಸ್ಯ ಗಣೇಶ್ ದೀಕ್ಷಿತ್, ಸಿ.ಎಂ.ಬಂಗಾರಸ್ವಾಮಿ, ರಾಜುನಾಯಕ, ಮಹದೇವಶೆಟ್ಟಿ, ಮಾದಣ್ಣ, ಲಕ್ಷ್ಮೀಕಾಂತ್, ಮಸಣಶೆಟ್ಟಿ, ಗಣೇಶ ದೀಕ್ಷಿತ್, ಶ್ರೀಧರ್, ಮಂಜುನಾಥ್ ಭಾಗವಹಿಸಿದ್ದರು.