ಚಿತ್ರದುರ್ಗ: ಪಿಡಿಒ ದುರುಪಯೋಗ ಮಾಡಿಕೊಂಡ ಹಣವನ್ನು ಸರ್ಕಾರಕ್ಕೆ ಜಮಾ ಮಾಡಿಸದೆ, ರಕ್ಷಣೆಗೆ ನಿಂತ ಹಿಂದಿನ ಜಿಪಂ ಸಿಇಒ ದಿವಾಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ತಾಳಿಕಟ್ಟೆ ಗ್ರಾಮದ ರೇವಣ್ಣ ಸೋಮವಾರ ಪ್ರತಿಭಟನೆ ನಡೆಸಿದರು.
ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿ, ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಪಂ ಪಿಡಿಒ ರಾಘವೇಂದ್ರ ತಮ್ಮ ಅಧಿಕಾರದ ಅವಧಿಯಲ್ಲಿ 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ 75 ಲಕ್ಷ ರೂ. ದುರುಪಯೋಗ ಮಾಡಿಕೊಂಡಿದ್ದಾರೆ. ಈ ಕುರಿತು ವಿಚಾರಣಾಧಿಕಾರಿ, ಮಂಡನಾಧಿಕಾರಿ ಆರೋಪ ಸಂಬಂಧ ತನಿಖೆ ನಡೆಸಿ, ಜಿಪಂಗೆ ವರದಿ ನೀಡಿದ್ದರು. ಆದರೂ ಕ್ರಮವಹಿಸಿಲ್ಲ. ಆದ್ದರಿಂದ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.