ಚಾಮರಾಜನಗರ: ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ತಾಂತ್ರಿಕ ಸಹಾಯಕನೊಬ್ಬನನ್ನು ಇತ್ತೀಚೆಗೆ ಲೋಕಾಯುಕ್ತ ಪೊಲೀಸರು ಲಂಚಪಡೆಯುವ ಆರೋಪದಲ್ಲಿ ಬಂಧಿಸಿದ್ದು, ಇಲಾಖೆಯ ಅಧಿಕಾರಿಯ ಮೇಲೆ ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮವಹಿಸಿಲ್ಲ ಎಂದು ಗುತ್ತಿಗೆದಾರರ ಸಹಕಾರ ಸಂಘದ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಆರೋಪಿಸಿದರು.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಯ ಗುಣ ಭರವಸೆ ವಿಭಾಗದ ತಾಂತ್ರಿಕ ಸಹಾಯಕ ನಂದರಾಜು ಎಂಬುವವರನ್ನು ಲೋಕಾಯುಕ್ತ ಪೊಲೀಸರು ಎಂ ಸ್ಯಾಂಡ್ ಗುಣಮಟ್ಟ ಪರೀಕ್ಷಾ ವರದಿ ನೀಡಲು ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಮಂಗಳವಾರ ಬಂಧಿಸಿದ್ದರು. ಈತ ಗುತ್ತಿಗೆ ನೌಕರನಾಗಿದ್ದು, ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಿ.ಆರ್.ರೂಪ ಅವರ ಸೂಚನೆಯ ಮೇರೆಗೆ ಹಣ ಪಡೆದುಕೊಂಡಿರುವುದು ೆನ್‌ನಲ್ಲಿ ರೆಕಾರ್ಡಿಂಗ್ ಆಗಿದೆ. ಅದಲ್ಲದೇ ಎ್ಐಆರ್‌ನಲ್ಲೂ ಎಇಇ ರೂಪ ಅವರ ಹೆಸರು ದಾಖಲಾಗಿದ್ದರೂ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಭ್ರಷ್ಟಚಾರ ನಿಯಂತ್ರಣ ಮಾಡಲು ಇರುವಂತಹ ಲೋಕಾಯುಕ್ತ ಪೊಲೀಸರೇ, ನಿಜವಾದ ಭ್ರಷ್ಟರಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂಬ ಅನುಮಾನ ಈ ಪ್ರಕರಣದಲ್ಲಿ ಕಾಣುತ್ತಿದೆ. ಎಇಇ ರೂಪ ಅವರ ಸೂಚನೆಯಂತೆಯೇ ಗುತ್ತಿಗೆ ನೌಕರ ಹಣವನ್ನು ಪಡೆದುಕೊಂಡಿದ್ದಾನೆ ಎಂಬುದಕ್ಕೆ ಆಧಾರವು ಇದೆ. ಅದಾಗ್ಯೂ ಎಇಇ ರೂಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧನ ಮಾಡುವಲ್ಲಿ ವಿಲರಾಗಿದ್ದಾರೆ. ಈ ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಈ ಕೂಡಲೇ ಎಇಇ ರೂಪ ಅವರನ್ನು ಬಂಧಿಸಬೇಕು. ಇಲ್ಲವಾದರೇ ರಾಜ್ಯ ಲೋಕಾಯುಕ್ತರಿಗೆ, ರಾಜ್ಯ ಪಾಲರಿಗೆ ಹಾಗೂ ರಾಷ್ಟ್ರಪತಿಗಳಿಗೆ ಈ ಪ್ರಕರಣ ಸಂಬಂಧ ಮನವಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಸಂಘದ ಅಸ್ಲಾಂ ಪಾಷ, ಎಸ್ಸಿ, ಎಸ್ಟಿ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಕೆ.ಮಂಜುನಾಥ್, ಉಪಾಧ್ಯಕ್ಷ ಮಹಾದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಪರ್ವತ್‌ರಾಜ್, ಸಿದ್ದಯ್ಯನಪುರ ಶಿವರಾಜು ಹಾಜರಿದ್ದರು.