ಬಾಗಲಕೋಟೆ ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡ ಬೀಳ್ಗೊಡುವ ಸಮಾರಂಭದಲ್ಲಿ ನಿಕಟಪೂರ್ವ ಜಿ.ಪಂ ಸಿಇಒ ಹಾಗೂ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್, ಪತ್ನಿ ಶಾಂಭವಿ ಅವರನ್ನು ಸನ್ಮಾನಿಸಲಾಯಿತು.  
ಜಿಲ್ಲೆ

ಅಧಿಕಾರವಧಿಯ ಕಾರ್ಯ ತೃಪ್ತಿಯಾಗಿರಬೇಕು

ಬಾಗಲಕೋಟೆ: ಯಾವುದೇ ಅಧಿಕಾರಿ ಹಾಗೂ ಅಽಕಾರ ಶಾಸ್ವತವಲ್ಲ. ಅದು ಬರುವುದು ಹೋಗುವುದು ನಿರಂತರ. ಆದರೆ ಅಧಿಕಾರವಧಿಯಲ್ಲಿ ಮಾಡಿದ ಕಾರ್ಯಗಳೆಲ್ಲವು ತೃಪ್ತಿದಾಯಕವಾಗಿಬೇಕು ಎಂದು ನಿಕಟಪೂರ್ವ ಜಿ.ಪಂ ಸಿಇಒ ಹಾಗೂ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡ ಬೀಳ್ಗೊಡುವ ಸಮಾರಂಭದಲ್ಲಿ ಪತ್ನಿ ಶಾಂಭವಿ ಜೊತೆ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಿದ್ದಾಗ ನನಗೆ ಬಾದಾಮಿಯ ಬಗ್ಗೆ ಗೊತ್ತಿತ್ತು. ಬಾಗಲಕೋಟೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆಗೊಂಡು ಅಧಿಕಾರ ವಹಿಸಿಕೊಂಡಾಗ ಗೊತ್ತಾಗಿದ್ದು, ಇಲ್ಲಿ ಸಲ್ಲಿಸಿದ ಕಾರ್ಯ ಅವಿಸ್ಮರಣೀಯವಾಗಿದೆ ಎಂದರು.

ಬಾಗಲಕೋಟೆಗೆ ಬಂದ ಕೆಲ ದಿನಗಳಲ್ಲಿ ಕೋವಿಡ್ ಮಹಾಮಾರಿ ಮತ್ತು ಪ್ರವಾಹದಂತ ಪ್ರಸಂಗಗಳಲ್ಲಿ ಇಲ್ಲಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನೆರವಿನಿಂದ ಯಾವುದೇ ಚುತಿ ಬರದಹಾಗೆ ನಿರ್ವಹಿಸಿದ ಕಾರ್ಯ ಅವಿಸ್ಮರಣೀಯವಾಗಿದೆ. ಕಳೆದ ಮೂರು ವರ್ಷಗಳ ಅಽಕಾರ ಅವಧಿಯಲ್ಲಿ ಮಾಡಿದ ಕಾರ್ಯಗಳನ್ನು ಮತ್ತು ಅಪೂರ್ಣಗೊಂಡ ಕಾರ್ಯವನ್ನು ಮುಂದುವರಿಸಿಕೊಂಡು ಹೋದರೆ ನನಗೆ ಬೆಂಬಲ ನೀಡಿದಂತೆ. ಬಾಗಲಕೋಟೆ ನನ್ನ ಜೀವನದಲ್ಲಿ ಮರೆಯಲಾಗದ ಜಿಲ್ಲೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ, ನೀಡಿ ನೀಡಿ ಕೆಟ್ಟರೂ ನಿಜವಿಲ್ಲದೆ, ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿಕೊಂಬ ನಮ್ಮ ಕೂಡಲಸಂಗಮದೇವ ಎಂಬ ಬಸವಣ್ಣನವರ ವಚನವನ್ನು ಹೇಳುವ ಮೂಲಕ ಕನ್ನಡಾಭಿಮಾನ ಮೆರೆದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ.ಮಾತನಾಡಿ, ಟಿ.ಭೂಬಾಲನ್ ಬಾಗಲಕೋಟೆಯಲ್ಲಿ ೩ ವರ್ಷಗಳ ಕಾಲ ಸಿಇಒ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಐ.ಎ.ಎಸ್ ಅಧಿಕಾರಿಯಾಗಿ ಇಷ್ಟೊಂದು ಅವಽಯಲ್ಲಿ ಸಿಗುವುದು ಅಪರೂಪ. ಅಂತಹ ಅವಕಾಶದಲ್ಲಿ ತೃಪ್ತಿದಾಯಕವಾದ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ, ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಅಪರ ಜಿಲ್ಲಾಽಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಮುಖ್ಯ ಯೋಜನಾಽಕಾರಿ ನಿರ್ಮಲಾ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮ ಉಕ್ಕಲಿ, ಪಂಚಾಯಿತಿ ಅಭಿವೃದ್ಧಿ ಅಽಕಾರಿಗಳ ಸಂಘದ ಅಧ್ಯಕ್ಷ ರಾಜು ವಾರದ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.