ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ನನ್ನ ಅಧಿಕಾರ ಅವಧಿಯಲ್ಲಿ ಮಾಡಿ ತೋರಿಸಿಕೊಟ್ಟಿದ್ದೇನೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಬೆಟ್ಟದಪುರ ಸಮೀಪದ ಶಾನುಭೋಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಈ ಬಾರಿ ಪ್ರಾದೇಶಿಕ ಪಕ್ಷ ಅಧಿಕಾರ ಹಿಡಿಯುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ರಾಷ್ಟ್ರೀಯ ಪಕ್ಷಗಳಿಗೆ ನಿದ್ದೆಗೆಡಿಸಿದೆ. ಮೈಸೂರಿನಲ್ಲಿ ನಡೆದ ಪಂಚರತ್ನ ಯಾತ್ರೆ ಸಮಾರೋಪಕ್ಕೆ ಆಗಮಿಸಿದ ರೈತ ಕುಟುಂಬದವರು ವ್ಯಕ್ತಪಡಿಸಿದ ಪ್ರೀತಿ ಎಂದಿಗೂ ಮರೆಯಲಾಗುವುದಿಲ್ಲ. ಏ.6ರಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪಿರಿಯಾಪಟ್ಟಣ ತಾಲೂಕಿನಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು.
ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮೈಮಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ, ದೊಡ್ಡಕಮರಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರೇಗೌಡ, ಮುಖಂಡರಾದ ಐಲಾಪುರ ರಾಮು, ಕೃಷ್ಣಪ್ಪ, ವಿದ್ಯಾಶಂಕರ್, ಮೋಹನ್, ಅಶೋಕ್ ಕುಮಾರ್, ಭುವನಹಳ್ಳಿ ಗಿರೀಶ್, ಬಸವರಾಜು, ಇಂದ್ರೇಶ್, ಹೇಮಂತ್ ಕುಮಾರ್, ರುದ್ರಮ್ಮ, ನಾಗಯ್ಯ, ಶೇಖರ್, ಗಣೇಶ್, ಪುಟ್ಟಸ್ವಾಮಿ, ಸುಂದರೇಶ್, ರಾಮಣ್ಣ, ನಾಗರಾಜು, ರಾಮಕೃಷ್ಣಪ್ಪ, ಕರಿಗೌಡ, ಪಟೇಲ್, ನಟೇಶ್, ಚಂದ್ರಶೇಖರ್ ಇದ್ದರು.