ಜಿಲ್ಲೆ

ಅದ್ಧೂರಿಯಾಗಿ ನಡೆದ ಮಾರಿತಟ್ಟೆ ಉತ್ಸವ

ಚಾಮರಾಜನಗರ: ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಕೊಂಗನಾಡು ಮಾರಮ್ಮನ ಹಬ್ಬದ ಅಂಗವಾಗಿ ನಡೆದ ಮಾರಿ ತಟ್ಟೆ ಉತ್ಸವ ಶುಕ್ರವಾರ ಅದ್ಧೂರಿಯಾಗಿ ನೆರವೇರಿತು.

ಗ್ರಾಮದ ಮಾರಮ್ಮನ ದೇವಸ್ಥಾನದ ಮುಂಭಾಗದಲ್ಲಿ ಮಾರಿತಟ್ಟೆಉತ್ಸವದ ಅಂಗವಾಗಿ ಮಾರಿತಟ್ಟೆಯನ್ನು (ಬಿದಿರು ಬೊಂಬು) ಎತ್ತಿ ನಿಲ್ಲಿಸುವ ಪೈಪೋಟಿ ನಡೆಯಿತು. ಈ ಸಂದರ್ಭದಲ್ಲಿ ಯುವಕರು ಶಿಳ್ಳೆ, ಚಪ್ಪಾಳೆ ಮೂಲಕ ದೇವರಿಗೆ ಜೈಕಾರ ಕೂಗಿ ಮಾರಿ ತಟ್ಟೆಯನ್ನು ಎತ್ತಿ ನಿಲ್ಲಿಸಿ ಸಂಭ್ರಮಿಸಿದರು.

ಮಾರಿ ತಟ್ಟೆ ನೋಡಲು ದೇವಸ್ಥಾನದ ಮುಂಭಾಗ ಎಲ್ಲಾ ಸಮುದಾಯದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವರ ಕೃಪೆಗೆ ಪಾತ್ರರಾದರು.ಗ್ರಾಮದ ಯುವಕರು ಡೋಲು, ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ನಂತರದಲ್ಲಿ ನಾಲ್ಕು ಜನಾಂಗದ ಮಾರಿತಟ್ಟೆಗಳನ್ನು ಸೇರಿಸಿ ಹಗ್ಗದಿಂದ ಕಟ್ಟಿ ಅದರ ಅಡಿಯಲ್ಲಿ ಬೆಂಕಿಯನ್ನು ಹಾಕಿ ತೂಗು ಹಾಕಿದ ಹಗ್ಗದಿಂದ ಉಯ್ಯಾಲೆ ಆಡಿದರು.