ಬಾಗಲಕೋಟೆ: ಹುಲ್ಲೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗುಡೂರ ಎಸ್ ಸಿ ಗ್ರಾಮದಲ್ಲಿ ಪಲ್ಲಕ್ಕಿ ಹಾಗೂ ಕಳಸಗಳ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಯ ಮಾರ್ಗವಾಗಿ ಬಹಳ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಸಂಪ್ರದಾಯದ ಪೂಜಾ ಕಾರ್ಯಗಳ ನಂತರ ಪಲ್ಲಕ್ಕಿ ಹಾಗೂ ಕಳಸಗಳ ಮೆರವಣಿಗೆ ನಡೆಯಿತು. ಪೂಜ್ಯ ಮಳ್ಳಯ್ಯಜ್ಜನವರ ಸಾನಿಧ್ಯದಲ್ಲಿ ರಾಮಲಿಂಗೇಶ್ವರ ದೇವಸ್ಥಾನದ ಹತ್ತಿರದ ಆರಂಭವಾದ ಕಳಸದ ಮೆರವಣಿಗೆ ಮಸೀದಿ, ದೇವರ ಸಂದಿ ಮೂಲಕ ಗ್ರಾಮದ ಪ್ರಮುಖ ರಸ್ತೆಯ ಮಾರ್ಗವಾಗಿ ಹುಲ್ಲೇಶ್ವರ ದೇವಾಲಯ ತಲುಪಿ ಕಳಸಾರೋಹನ ಕಾರ್ಯ ನೆರವೇರಿಸಲಾಯಿತು.
ಒಳಿತು ಕೆಡಕುಗಳ ಸಮಚಿತ್ತವು ವರ್ಷದಲ್ಲಿನ ಮಳೆ ಬೆಳೆಯ ಲೆಕ್ಕಾಚಾರದಲ್ಲಿ ರೈತಾಪಿ ವರ್ಗವು ಜೀವನ ಸಾಗುತ್ತಿದ್ದು., ದೇವಾಲಯದಲ್ಲಿನ ಕುದುರೆ ಮೂರ್ತಿ, ಪಗಡೆ, ಪಂಚ ಕಳಸ, ಕರಿ ಕಳಸ, ನಂದಿಕೋಲು, ಕೊಂತ, ಬಿಲ್ಲುಬಾಣ, ಮುಳ್ಳುಗಾವಲುಗಳಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಗಂಜಿಹಾಳ ಹೊಲದ ಕಟ್ಟೆಯ ಹತ್ತಿರ ಮಳ್ಳಯ್ಯಜ್ಜನಿಂದ ಸೂಚು ನಡೆಸಿದರು.
ಹುಲ್ಲೇಶ್ವರ ದೇವಾಲಯದ ಡೊಳ್ಳು ಕುಣಿತ ಬಳಗದಿಂದ ವಿಶೇಷ ಡೊಳ್ಳು ಮೇಳವು ಭಕ್ತರ ಗಮನ ಸೆಳೆಯಿತು. ಗ್ರಾಮದ ಹಿರಿಯರು ಯುವಕರು ಮಹಿಳೆಯರು ಭಕ್ತಾದಿಗಳು ಹಾಗೂ ಇತರರಿದ್ದರು.