ಜಿಲ್ಲೆ

ಅದ್ದೂರಿ ಶ್ರೀ ದತ್ತ ಜಯಂತಿ

Bidar

ಭಾಲ್ಕಿ: ತಾಲೂಕಿನ ಖಾನಾಪುರ ಗ್ರಾಮದ ಹೊರವಲಯದ ಶ್ರೀ ಆನಂದ ಆಶ್ರಮದಲ್ಲಿ ದತ್ತ ಜಯಂತಿ ನಿಮಿತ್ತ ಮಂಗಳವಾರ ಪಲ್ಲಕ್ಕಿ ಉತ್ಸವ ಶೃದ್ಧೆ, ಭಕ್ತಿಯೊಂದಿಗೆ ಅದ್ದೂರಿಯಾಗಿ ನಡೆಯಿತು. ಜಯಂತಿ ನಿಮಿತ್ತ ದಿನವಿಡೀ ವಿವಿಧ ಕಾರ್ಯಕ್ರಮ ಜರುಗಿದವು. ಯಜ್ಞ,ಅಭಿಷೇಕ, ಭಜನೆ, ಕೀರ್ತನೆ ನಡೆದವು.

ಬೆಳಗ್ಗಿನ ಜಾವದಲ್ಲಿ ದತ್ತ ಪಲ್ಲಕ್ಕಿ ಉತ್ಸವ ನಡೆಯಿತು. ಆನಂದ ಆಶ್ರಮದಿಂದ ಆರಂಭವಾದ ಪಲ್ಲಕ್ಕಿ ಮೆರವಣಿಗೆ ಗ್ರಾಮದ ವಿವಿಧೆಡೆ ಸಂಚರಿಸಿ ಶ್ರೀ ಮಲ್ಲಣ್ಣ ಮಂದಿರಕ್ಕೆ ಬಂದು ಕೊನೆಗೊಂಡಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಭಜನೆ ಗಮನ ಸೆಳೆಯಿತು. ಕುಂಭ ಕಳಸ ಹೊತ್ತ ಮಹಿಳೆಯರು ಸೇರಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಿಸಿದವು.

ಪ್ರಮುಖರಾದ ಪಪ್ಪು ಪಾಟೀಲ್ ಖಾನಾಪುರ, ವಿನೋದ ಮಲ್ಕಾಪುರ, ರಾಜೇಂದ್ರ, ಅನೀಲ ಪೋಲಾ, ದಿಲೀಪಕುಮಾರ, ನಾಗೇಶ, ಧನಸಿಂಗ್ ಇತರರಿದ್ದರು.