ಬೀದರ್: ಗಣೇಶ ಚತುರ್ಥಿಯನ್ನು ಸೆ.19ರಿಂದ 23ರವರೆಗೆ ನಗರದಲ್ಲಿ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಶ್ರದ್ಧೆ, ಭಕ್ತಿಯಿಂದ ಆಚರಿಸಲು ಗಣೇಶ ಮಹಾ ಮಂಡಳ ನಿರ್ಧರಿಸಿದೆ.
ನಗರದ ರಾಮ ಮಂದಿರದಲ್ಲಿ ಹಿರಿಯರಾದ ನಂದಕಿಶೋರ ವರ್ಮಾ ಅಧ್ಯಕ್ಷತೆಯಲ್ಲಿ ನಡೆದ ಮಹಾಮಂಡಳ ಸಭೆಯಲ್ಲಿ ಗಣೇಶ ಚತುರ್ಥಿ ಆಚರಣೆ ಕುರಿತು ಸುದೀರ್ಘ ಸಮಾಲೋಚನೆ ನಡೆಯಿತು. ರಾಷ್ಟ್ರದ ಏಕತೆಯನ್ನು ಬಿಂಬಿಸುವ ಹಬ್ಬ ಇದಾಗಿದೆ. ಎಲ್ಲ ಗಣೇಶ ಮಂಡಳಿಗಳು ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಉತ್ಸವದಲ್ಲಿ ಬಾಲ ಗಂಗಾಧರನಾಥ ತಿಲಕ್, ಸರ್ದಾರ್ ವಲಭಭಾಯಿ ಪಟೇಲ್ ಭಾವಚಿತ್ರ ಅಳವಡಿಸಬೇಕು. ವಿಶ್ವದಲ್ಲಿ ಗೌರವ ಹೆಚ್ಚಿಸಿದ ಚಂದ್ರಯಾನ-3 ಮತ್ತು ಸೌರ ಮಿಷನ್ ಎಲ್-1 ಯಶಸ್ವಿಯಾಗಿ ಉಡಾವಣೆ ಮಾಡಿರುವ ಕುರಿತು ಯುವಕರಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಸಾರ್ವಜನಿಕ ಗಣೇಶ ಮಂಡಳಗಳಲ್ಲಿ ಅಲಂಕಾರ ಮಾಡಬೇಕು. ಎಲ್ಲ ಮನೆಗಳಲ್ಲಿ ಮಣ್ಣಿನ ಗಣಪತಿ ಪ್ರತಿಷ್ಠಾಪಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು. ನಗರದಲ್ಲಿ ಸೆ.19ಕ್ಕೆ ಗಣೇಶ ಪ್ರತಿಷ್ಠಾಪನೆ ಮಾಡಿ ಸೆ.23ಕ್ಕೆ ವಿಸರ್ಜನೆ ಮಾಡಲು ನಿರ್ಧರಿಸಲಾಯಿತು.
ಬಾಬು ವಾಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ವೇಳೆ ಗಣೇಶ ವಿಸರ್ಜನೆ ಹೊಂಡದ ನಿರ್ಮಾಣಕ್ಕಾಗಿ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿದ್ದಾರೆ. ಹೀಗಾಗಿ ಪ್ರಸಕ್ತ ವರ್ಷ ಈ ಹೊಂಡದಲ್ಲಿ ಕೆಲ ಗಣಪತಿಗಳ ವಿಸರ್ಜನೆ ಮಾಡಬೇಕೆಂದು ನಗರಸಭೆ ಸದಸ್ಯ ಶಶಿ ಹೊಸಳ್ಳಿ ಇತರರು ಸಲಹೆ ನೀಡಿದರು.
ಪದಾಧಿಕಾರಿಗಳ ನೇಮಕ: ಸಭೆಯಲ್ಲಿ ಗಣೇಶ ಮಹಾ ಮಂಡಳಕ್ಕೆ ಪ್ರಸಕ್ತ ವರ್ಷದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ (ಗೌರವಾಧ್ಯಕ್ಷ), ಚಂದ್ರಶೇಖರ ಪಾಟೀಲ್ ಗಾದಗಿ (ಅಧ್ಯಕ್ಷ), ಬಾಬು ವಾಲಿ (ಪ್ರಧಾನ ಕಾರ್ಯದರ್ಶಿ), ಡಾ.ರಜನೀಶ್ ವಾಲಿ (ಖಜಾಂಚಿ) ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರು: ಈಶ್ವರಸಿಂಗ್ ಠಾಕೂರ್, ರೇವಣಸಿದ್ದಪ್ಪ ಜಲಾದೆ, ದೀಪಕ ವಾಲಿ, ರಾಜು ಚಿದ್ರಿ, ಮಹೇಶ ಪಾಲಂ, ಬಸವರಾಜ ಪವಾರ್, ಸತೀಶ್ ಮೊಟ್ಟಿ, ಭೂಷಣ ಪಾಠಕ್, ಸಚಿನ್ ನವಲಕಿಲೆ, ಮನೋಹರ ದಂಡೆ, ನರೇಶ ಗೌಳಿ. ಕಾರ್ಯದರ್ಶಿ: ಸುಭಾಷ ಮಡಿವಾಳ, ವೀರಶೆಟ್ಟಿ ಪಾಟೀಲ್ ನೌಬಾದ್, ಅರುಣ ಬಸವನಗರ, ಮಹೇಶ್ವರ ಸ್ವಾಮಿ, ನೀಲೇಶ ರಕ್ಷಾಳ, ವೀರೇಶ ಸ್ವಾಮಿ, ಶ್ರೀಮಂತ ಸಪಾಟೆ, ವಿರೂಪಾಕ್ಷ ಗಾದಗಿ, ನವೀನ್, ರೋಷನ್ ವರ್ಮಾ, ಗಣೇಶ ಭೋಸ್ಲೆ, ಮುನ್ನಾ ಆರ್ಯ, ರಾಹುಲ್ ಅಟಲ್, ರಾಜಾರಾಮ ಚಿಟ್ಟಾ, ದೇವೇಂದ್ರ ಎಮ್ಮೆಕರ್, ಸುರೇಶ ಮಾಶೆಟ್ಟಿ, ಬಸವರಾಜ ಪವಾರ್.
ಚೌಬಾರಾ ಸ್ವಾಗತ ಸಮಿತಿ: ನಂದಕಿಶೋರ ವಮರ್ಾ (ಅಧ್ಯಕ್ಷ), ಸುಭಾಷ ಚೋಳಕರ್ (ಕಾರ್ಯದರ್ಶಿ), ಚಂದ್ರಶೇಖರ ಗಾದಾ (ಖಜಾಂಚಿ). ಅಲಂಕಾರ ಸಮಿತಿ: ಹಣಮಂತ ಬುಳ್ಳಾ (ಗೌರವಾಧ್ಯಕ್ಷ), ಸುನೀಲ ದಳವೆ (ಅಧ್ಯಕ್ಷ). ಮೆರವಣಿಗೆ ಸಮಿತಿ: ಸೂರ್ಯಕಾಂತ ಶೆಟಕಾರ (ಗೌರವಾಧ್ಯಕ್ಷ), ಸೋಮಶೇಖರ ಪಾಟೀಲ್ ಗಾದಗಿ (ಅಧ್ಯಕ್ಷ), ಶಶಿ ಹೊಸಳ್ಳಿ (ಪ್ರಧಾನ ಕಾರ್ಯದರ್ಶಿ).