ಬೆಳಗಾವಿಯ ಬಿಎಸ್ ಚನ್ನಬಸಪ್ಪ ಆ್ಯಂಡ್ ಸನ್ಸ್ ಟೆಕ್ಸ್‌ಟೈಲ್ ಮಾಲ್‌ನ ಅದೃಷ್ಟಶಾಲಿ ಗ್ರಾಹಕರಿಗೆ ಭಾನುವಾರ ಕಾರು ಕೀ ಬಹುಮಾನ ವಿತರಿಸಲಾಯಿತು. ಮಾಲೀಕರಾದ ಬಿ.ಯು.ಚಂದ್ರಶೇಖರ, ಬಿ.ಎಸ್.ಮೃಣಾಲ್, ಅಕ್ಷಯ ಗಾಡವಿ, ವಿಶ್ವದೀಪ ಪಾಟೀಲ, ಸಿ.ಡಿ.ದೊಡ್ಡಮನಿ, ಉಮೇಶ ಕೆ.ಎನ್., ಅಜ್ಮದ್ ಜಮಾದಾರ ಇತರರಿದ್ದರು. 
ಜಿಲ್ಲೆ

ಅದೃಷ್ಟಶಾಲಿ ವಿಜೇತರಿಗೆ ಬಹುಮಾನ ವಿತರಣೆ

ಬೆಳಗಾವಿ: ಗ್ರಾಹಕರ ನೆಚ್ಚಿನ ಉತ್ಸವವಾಗಿ ಹೆಸರಾಗಿರುವ ಕನ್ನಡಿಗರ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್‌ನ ಶಾಪಿಂಗ್ ಉತ್ಸವದ ಬಿ.ಎಸ್.ಚನ್ನಬಸಪ್ಪ ಆ್ಯಂಡ್ ಸನ್ಸ್ ಟೆಕ್ಸ್‌ಟೈಲ್ ಮಾಲ್‌ನ ಅದೃಷ್ಟಶಾಲಿ ಗ್ರಾಹಕರು ಆಕರ್ಷಕ ಬಹುಮಾನಗಳನ್ನು ಪಡೆದು ವಿಜಯೋತ್ಸವಕ್ಕೆ ಸಾಕ್ಷಿಯಾದರು.

ನಗರದ ತಿಳಕವಾಡಿಯಲ್ಲಿ ‘ಬಿಎಸ್‌ಸಿ ಟೆಕ್ಸ್ ಟೈಲ್ ಮಾಲ್’ ಭಾನುವಾರ ಹಮ್ಮಿಕೊಂಡಿದ್ದ ವಿಜೇತ ಅದೃಷ್ಟ ಶಾಲಿಗಳಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಬಿಎಸ್‌ಸಿ ಟೆಕ್ಸಟೈಲ್ ಮಾಲ್‌ನ ಮಾಲೀಕರಾದ ಬಿ.ಯು.ಚಂದ್ರಶೇಖರ ಹಾಗೂ ಬಿ.ಎಸ್.ಮೃಣಾಲ್ ಅವರು ವಿಶ್ವದೀಪ ಪಾಟೀಲ ದಂಪತಿಗೆ ಕಾರು ಸಿ.ಡಿ.ದೊಡ್ಡಮನಿ ಕುಟುಂಬಕ್ಕೆ ಬೈಕ್ ಕೀ ವಿತರಿಸಿ ಅಭಿನಂದಿಸಿದರು.

ಅಮೃತ ಗೋಡಕೆ ಅವರಿಗೆ ಸಿಲ್ವರ್ ಕ್ವಾಯಿನ್, ಸಂಜು ಸಾತಿಹಾಳ ಅವರಿಗೆ ಸೇಫ್ ಲಾಕರ್, ಪದ್ಮಾವತಿ ಡವಳೆ ಅವರಿಗೆ ಇಲೆಕ್ಟ್ರಿಕ್ ಕಿತ್ತಲೆ, ಜಯರಾಜ ಪಾಟೀಲ ಹಾಗೂ ಪೂಜಾ ಮೋಹಿತೆ ಅವರಿಗೆ ತಲಾ ಒಂದು ಪ್ರೆಶರ್ ಕುಕ್ಕರ್ ಸೇರಿ ಒಟ್ಟು 14 ಅದೃಷ್ಟಶಾಲಿ ಗ್ರಾಹಕರಿಗೆ ಪ್ರೆಶರ್ ಕುಕ್ಕರ್, ಗ್ರೈಂಡರ್, ಸಿಲ್ವರ್ ಕ್ವಾಯಿನ್, ಗ್ಯಾಸ್ ಸ್ಟೌ ಸೇರಿ ಹಲವು ಬಹುಮಾನ ವಿತರಿಸಲಾಯಿತು.

ಕಾರು ವಿಜೇತ ವಿಶ್ವದೀಪ ಪಾಟೀಲ ಮಾತನಾಡಿ, ಕುಟುಂಬದ ಎಲ್ಲ ಸದಸ್ಯರಿಗೆ ದೀಪಾವಳಿಗೆ 40 ಸಾವಿರ ರೂ. ಬೆಲೆಬಾಳುವ ಬಟ್ಟೆ ಖರೀದಿಸಿದೆವು. ಆಗ ಸಹೋದರಿ ಶುಭಾಂಗಿ ಪಾಟೀಲ ಹೆಸರಲ್ಲಿ ಕೂಪನ್ ಬರೆದು ಹಾಕಿದ್ದೆವು. ಇದೀಗ ಸಹೋದರಿಯ ಹೆಸರಲ್ಲಿ ಕಾರು ಲಭಿಸಿರುವುದು ಖುಷಿ ಹೆಚ್ಚಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ಬೈಕ್ ವಿಜೇತ ಸಿ.ಡಿ.ದೊಡ್ಡಮನಿ ಅವರು ಮಾತನಾಡಿ, ದಾವಣಗೆರೆಯಲ್ಲಿ ಬಿ.ಎಸ್.ಚನ್ನಬಸಪ್ಪ ಆ್ಯಂಡ್ ಸನ್ಸ್ ಮಳಿಗೆಯಲ್ಲಿ ಹಲವು ವರ್ಷಗಳಿಂದ ಖರೀದಿಸುತ್ತ ಬಂದಿದ್ದೇವೆ. ಅತ್ಯಂತ ಗುಣಮಟ್ಟದ ಹಾಗೂ ಬೆಲೆಯಲ್ಲೂ ನ್ಯಾಯಯುತವಾಗಿರುವ ಮಳಿಗೆ ಬೆಳಗಾವಿಯಲ್ಲಿ ಆರಂಭವಾದಾಗಲೇ ಖುಷಿಪಟ್ಟಿದ್ದೆವು. ಎಲ್ಲ ಬಗೆಯ ಬಟ್ಟೆಗಳು ಒಂದೇ ಮಳಿಗೆಯಲ್ಲಿ ದೊರೆಯುವುದರಿಂದ ಮಕ್ಕಳು, ಮೊಮ್ಮಕ್ಕಳನ್ನು ನೆಮ್ಮದಿಯಿಂದ ಇಲ್ಲಿಗೆ ಕರೆತಂದು ಶಾಫಿಂಗ್ ಮಾಡಿದೆವು. ಇದೀಗ, ವಿಜಯೋತ್ಸವದಲ್ಲಿ ಬೈಕ್ ಬಂದಿರುವುದು ಇಡಿ ಕುಟುಂಬಕ್ಕೆ ಖುಷಿ ಕೊಟ್ಟಿದೆ ಎಂದು ಸಂಭ್ರಮಿಸಿದರು. ಮಾಲೀಕರಾದ ಬಿ.ಯು.ಚಂದ್ರಶೇಖರ ಹಾಗೂ ಬಿ.ಎಸ್.ಮೃಣಾಲ್ ಮಾತನಾಡಿ, ಐದು ವರ್ಷಗಳಿಂದಲೂ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್‌ನ ಸಾರಥ್ಯದಲ್ಲಿ ನಡೆಯುವ ಶಾಫಿಂಗ್ ಉತ್ಸವದಲ್ಲಿ ಪಾಲ್ಗೊಂಡು, ಅದೃಷ್ಟಶಾಲಿ ಗ್ರಾಹಕರೊಂದಿಗೆ ವಿಜಯಯೋತ್ಸವ ಆಚರಿಸುತ್ತಿದ್ದೇವೆ. ವಿಜಯವಾಣಿಯ ವಿಜಯೋತ್ಸವ ನಿಜಕ್ಕೂ ಅದ್ಬುತವಾಗಿ ನಡೆದು ಬರುತ್ತಿದ್ದು, ಪಾರದರ್ಶ ಕವಾಗಿ ಆಯೋಜನೆ ಮಾಡಲಾಗುತ್ತದೆ. ಅದರಲ್ಲೂ ಅದೃಷ್ಟಶಾಲಿಗಳನ್ನು ಅಂಧ ಮಕ್ಕಳು ಆಯ್ಕೆ ಮಾಡುವ ಪ್ರಕ್ರಿಯೆಯಂತೂ ನಿಜಕ್ಕೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಿಎಸ್‌ಸಿ ಟೆಕ್ಟ್‌ಟೈಲ್‌ನ ಪಿಆರ್‌ಒ ಉಮೇಶ ಕೆ.ಎನ್. ವಿಜಯವಾಣಿ ಜಾಹೀರಾತು ಪ್ರತಿನಿಧಿ ಅಕ್ಷಯ ಗಾಡವಿ, ಸ್ಟೋರ್ ಮ್ಯಾನೇಜರ್ ಅಜ್ಮದ್ ಜಮಾದಾರ, ಎಚ್‌ಆರ್ ವ್ಯವಸ್ಥಾಪಕ ವಿಠ್ಠಲ ಅಸೋದೆ ಸೇರಿ ಬಿಎಸ್‌ಸಿ ಗ್ರಾಹಕರು ಇತರರಿದ್ದರು.