ಜಿಲ್ಲೆ

ಅದಾಲತ್​ನಲ್ಲಿ 1267 ಪ್ರಕರಣ ಇತ್ಯರ್ಥ

ಶಿರಾ: ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ, ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶಿರಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಲೋಕ ಅದಾಲತ್​ ಕಾರ್ಯಕ್ರಮದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಒಟ್ಟು 5 ಜೋಡಿಗಳು ಒಂದಾದರು ಹಾಗೂ 1267 ಪ್ರಕರಣಗಳು ಇತ್ಯರ್ಥಗೊಂಡವು. ಹಿರಿಯ ಸಿವಿಲ್​ ನ್ಯಾಯಾಲಯದ 386 ಪ್ರಕರಣಗಳು, ಪ್ರಧಾನ ಸಿವಿಲ್​ ನ್ಯಾಯಾಲಯದ 377 ಪ್ರಕರಣಗಳು, ಸಿವಿಲ್​ ನ್ಯಾಯಾಲಯದ 504 ಪ್ರಕರಣಗಳು ಸೇರಿ ಒಟ್ಟು 1267 ಪ್ರಕರಣಗಳು ಹಿರಿಯ ಸಿವಿಲ್​ ನ್ಯಾಯಾಧೀಶೆ ಝರೀಫಾ ಬಾನು.ಎ.ಆರ್​, ಪ್ರಧಾನ ಸಿವಿಲ್​ ನ್ಯಾಯಾಧಿಶ ನರಸಿಂಹಮೂರ್ತಿ.ಎ, ಅಕ ಸಿವಿಲ್​ ನ್ಯಾಯಾಧೀಶೆ ಶರ್ಮಿಳಾ.ಇ.ಜೆ ಅವರ ಸಮ್ಮುಖದಲ್ಲಿ ಇತ್ಯರ್ಥಗೊಂಡವು.