ಗುಳೇದಗುಡ್ಡದ ತಹಸೀಲ್ದಾರ್ ಕಚೇರಿಯಲ್ಲಿ ಸ್ವಾತಂತ್ರೊೃೀತ್ಸವ ದಿನಾಚರಣೆ ನಿಮಿತ್ತ ಪೂರ್ವಭಾವಿ ಸಭೆ ನಡೆಯಿತು. ತಹಸೀಲ್ದಾರ್ ಎಸ್.ಎಫ್. ಬೊಮ್ಮಣ್ಣವರ, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ಉಪ ತಹಸೀಲ್ದಾರ್ ವೀರೇಶ ಬಡಿಗೇರ, ಪುರಸಭೆ ಮುಖ್ಯಾಧಿಕಾರಿ ರಮೇಶ ಪದಕಿ ಇತರರಿದ್ದರು. 
ಜಿಲ್ಲೆ

ಅದ್ದೂರಿ ಸ್ವಾತಂತ್ರೋತ್ಸವ ಆಚರಣೆಗೆ ನಿರ್ಧಾರ

ಗುಳೇದಗುಡ್ಡ: ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ತಾಲೂಕು ಆಡಳಿತದಿಂದ ಆ. 15 ರಂದು 76ನೇ ಸ್ವಾತಂತ್ರೊೃೀತ್ಸವ ಅದ್ದೂರಿಯಾಗಿ ಆಚರಿಸಲಾಗುವುದೆಂದು ತಹಸೀಲ್ದಾರ್ ಎಸ್.ಎಫ್ ಬೊಮ್ಮಣ್ಣವರ ಹೇಳಿದರು.

ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಅಂದು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ, ಸಾಧಕರಿಗೆ ಸನ್ಮಾನ, ಶಾಲೆ ಮಕ್ಕಳಿಂದ ದೇಶಭಕ್ತಿ ಗೀತೆ, ಏಕಪಾತ್ರಾಭಿನಯ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ ಮಾತನಾಡಿ, ತಾಲೂಕಿನಲ್ಲಿ ಪ್ಲಾಸ್ಟಿಕ್ ಧ್ವಜಗಳ ಬಳಕೆ ನಿಷೇಧಿಸಲಾಗಿದೆ. ಅಂಥ ಮಾರಾಟಗಾರರು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಉಪ ತಹಸೀಲ್ದಾರ್ ವೀರೇಶ ಬಡಿಗೇರ, ಪುರಸಭೆ ಮುಖ್ಯಾಧಿಕಾರಿ ರಮೇಶ ಪದಕಿ, ಕ್ರೈಂ ಪಿಎಸ್‌ಐ ಸಿ.ವಿ. ಕಿರಿಶ್ಯಾಳ, ಪ್ರಾಚಾರ್ಯ ವಿಠ್ಠಲ ಕಳಸಾ, ಉಪಖಜಾನೆ ಅಧಿಕಾರಿ ಎಸ್.ಐ. ಹಿರೇಮಠ, ಮಹಾಂತೇಶ ಗಾಣಿಗೇರ, ಎಸ್.ಎ್. ಜಾಧವ್, ಡಾ. ಅನೀಲ ಉಕ್ಕಲಿ, ವಿ.ವೈ. ಹೊಸಮನಿ, ಸಿಆರ್‌ಪಿ ಜೆ.ಎಂ. ಬುಳ್ಳಾ, ಎನ್.ಆರ್. ಜುಮನಾಳ, ಸಿ.ಎಸ್. ಗಾಜಿ ಮತ್ತಿತರರಿದ್ದರು.